ಕ್ರೀಡೆ

ಪಾಕ್‌ಗೆ ಇಂದು ಡು ಆರ್ ಡೈ ಪಂದ್ಯ; ಸೆಮೀಸ್ ಆಸೆ ಜೀವಂತವಿರಿಸಕಲು ಬಾಬರ್ ಪಡೆ ಹೋರಾಟ

ಕೋಲ್ಕತ: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಸತತ 4 ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಮಾಜಿ ಚಾಂಪಿಯನ್ ಪಾಕಿಸ್ತಾನ ಸೆಮೀಸ್ ಆಸೆ ಜೀವಂತವಿರಿಸಲು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶ ತಂಡದ ಸವಾಲು ಎದುರಿಸಲಿದೆ. ಬಾಬರ್ ಅಜಮ್ ಪಡೆಗೆ ಗೆಲುವಿನ ಹಳಿಗೆ ಮರಳುವ ಮೂಲಕ ರನ್‌ರೇಟ್ ಸುಧಾರಿಸುವ ನಿರೀಕ್ಷೆಯಲ್ಲಿದೆ.

ಆಡಿರುವ ಆರು ಪಂದ್ಯಗಳಲ್ಲಿ 2 ಗೆಲುವು, 4 ಸೋಲಿನೊಂದಿಗೆ 4 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಪಾಕ್ ಸೆಮೀಸ್ ಹಾದಿ ಕಠಿಣ ಎನಿಸಿದರೂ, ಇನ್ನೊಂದು ಸೋಲು ಸಂಪೂರ್ಣ ಉಪಾಂತ್ಯದ ಬಾಗಿಲು ಮುಚ್ಚಲಿದೆ. ಉಳಿದಿರುವ ಎಲ್ಲ ಪಂದ್ಯಗಲ್ಲಿ ಪಾಕ್ ಗೆಲುವು ದಾಖಲಿಸಬೇಕಾದ ಅನಿವಾರ್ಯತೆಯಲ್ಲಿದೆ. ಇನ್ನೂ ಬಾಂಗ್ಲಾದೇಶ ಸಹ 6 ಪಂದ್ಯಗಳಲ್ಲಿ 5ರಲ್ಲಿ ಸೋಲು ಕಂಡು ಟೂರ್ನಿಯಲ್ಲಿ ಇನ್ನೂ 16 ಪಂದ್ಯಗಳ ಬಾಕಿಯಿರುವಂತೆಯೇಉಪಾಂತ್ಯದ ಕನಸು ಕೈ ಚೆಲ್ಲಿದೆ. ಮಾಜಿ ಚಾಂಪಿಯನ್ ಪಾಕ್‌ಗೆ ಆರಂಭಿಕರ ವೈಲ್ಯ ದೊಡ್ಡ ಹಿನ್ನಡೆ ತಂದಿದೆ. ಬಾಬರ್ ಅಜಮ್ ಅವರ ನಾಯಕತ್ವ ಸಹ ಸಾಕಷ್ಟು ಮಾಜಿ ಕ್ರಿಕೆಟಿಗರ ಟೀಕೆಗೆ ಗುರಿಯಾಗಿದೆ. ಮೊಹಮದ್ ರಿಜ್ವಾನ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಬ್ಯಾಟಿಂಗ್ ವೈಲ್ಯದ ನಡುವೆಯೂ ಬೌಲರ್‌ಗಳ ಪ್ರದರ್ಶನದಿಂದ ಹೋರಾಟ ನಡೆಸಿದ ಪಾಕ್‌ಗೆ ಈ ಬಾರಿ ಬ್ಯಾಟಿಂಗ್ ವಿಭಾಗವೂ ಸಾಥ್ ನೀಡಬೇಕಿದೆ. ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಶಾಹೀನ್ ಷಾ ಆಫ್ರಿದಿ, ಹ್ಯಾರಿಸ್ ರೌಫ್ ಮತ್ತು ಮೊಹಮದ್ ವಾಸೀಂ ಬಾಂಗ್ಲಾ ಬ್ಯಾಟರ್‌ಗನ್ನು ಕಟ್ಟಿಹಾಕುವ ಸಾಧ್ಯತೆಗಳಿವೆ.

ಇನ್ನೂ ನೆದರ್ಲೆಂಡ್ ಎದುರು ಆಘಾತಕಾರಿ ಸೋಲು ಕಂಡಿರುವ ಬಾಂಗ್ಲಾದೇಶ ಸೆಮೀಸ್ ರೇಸ್‌ನಲ್ಲಿ ಇರದಿದ್ದರೂ,ಅಂಕಪಟ್ಟಿಯಲ್ಲಿ ಮೇಲಕ್ಕೇರುವ ತವಕದಲ್ಲಿದೆ. ಟೂರ್ನಿ ಆರಂಭಕ್ಕೂ ಮುನ್ನ ಒಳಜಗಳದಿಂದಾಗಿ ಸುದ್ದಿಯಾಗಿದ್ದ ಬಾಂಗ್ಲಾ ಟೂರ್ನಿಯಲ್ಲಿ ನೀರಸ ನಿರ್ವಹಣೆ ಕಂಡಿದೆ.

ವಿಶ್ವಕಪ್ ಮುಖಾಮುಖಿ-2

ಪಾಕ್-1

ಬಾಂಗ್ಲಾದೇಶ-1

ಏಕದಿನ ಮುಖಾಮುಖಿ-38

ಪಾಕ್ -33

ಬಾಂಗ್ಲಾದೇಶ -35

ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.