ಕ್ರೀಡೆ

VIDEO: ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಪಾಕ್ ಆಟಗಾರ್ತಿಯ ಸಂದೇಶ ಹೀಗಿದೆ...!

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ನಿವೃತ್ತಿ ನಿರ್ಧಾರ ಇಡೀ ವಿಶ್ವ ಕ್ರಿಕೆಟ್​ಗೆ ದಿಢೀರ್​ ಶಾಕ್​ ನೀಡಿದೆ. ಟಿ20 ವಿಶ್ವಕಪ್​ ಟೂನಿರ್ಯಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭಾವಿಸಿದ್ದರೂ, ಕರೊನಾ ವೈರಸ್​ ಭೀತಿಯಿಂದ ಟೂನಿರ್ಯೇ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಹಾಲಿ-ಮಾಜಿ ಆಟಗಾರರಿಂದ ಧೋನಿ ನಿವೃತ್ತಿ ಜೀವನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಧೋನಿ ಅಭಿಮಾನಿ ಪಾಕಿಸ್ತಾನ ಮಹಿಳಾ ತಂಡ ಸದಸ್ಯೆ ಕೈನತ್​ ಇಮ್ತಿಯಾಜ್​ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ನೀವೊಬ್ಬ ದಿಗ್ಗಜ ಕ್ರಿಕೆಟಿಗ, ಯಶಸ್ಸಿನ ನಾಯಕ ಹಾಗೂ ಅತ್ಯುತ್ತಮ ಫಿನಿಷರ್​ ನೀವು. ನಿಮಗೆ ನೀವೇ ಸಾಟಿ. ಸರ್​, ನಿಮ್ಮ ವೃತ್ತಿ ಜೀವನವೇ ನಮಗೆ ಮಾದರಿ. ವಿಶ್ವ ಕ್ರಿಕೆಟ್​ ನಿಮ್ಮ ಕೊಡುಗೆಯನ್ನು ಕೇವಲ ಪದಗಳಿಂದ ವಣಿರ್ಸಲಾಗುವುದಿಲ್ಲ ಎಂದು ಧೋನಿ ಅವರ ದೊಡ್ಡ ಅಭಿಮಾನಿ ಪಾಕಿಸ್ತಾನದ ಆಟಗಾತಿರ್ ಕೈನತ್​ ಇಮ್ತಿಯಾಜ್​ ಬರೆದುಕೊಂಡಿದ್ದಾರೆ. ಜತೆಗೆ 2011ರ ಏಕದಿನ ವಿಶ್ವಕಪ್​ನ ಫೈನಲ್​ನಲ್ಲಿ ಧೋನಿ ಸಿಡಿಸಿದ ವಿನ್ನಿಂಗ್​ ಸಿಕ್ಸರ್​ ವಿಡಿಯೋವನ್ನು ಪ್ರಕಟಿಸಿದ್ದಾರೆ. ಧೋನಿ ವಿದಾಯದ ಬೆನ್ನಲ್ಲೇ ಸುರೇಶ್​ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು.

ಕೈನತ್​ ಇಮ್ತಿಯಾಜ್​ ಜತೆಗೆ, ಮಾಜಿ ವೇಗಿ ಶೋಯಿಬ್​ ಅಖ್ತರ್​ ಸೇರಿದಂತೆ ಪಾಕಿಸ್ತಾನದ ಹಲವು ಆಟಗಾರರು ಧೋನಿಗೆ ಶುಭಾಶಯ ಹೇಳಿದ್ದಾರೆ. ಪಾಕಿಸ್ತಾನ ತಂಡದ ಪ್ರಮುಖ ವೇಗಿಯಾಗಿರುವ ಕೈನತ್​ ಇಮ್ತಿಯಾಜ್​, ಇದುವರೆಗೂ 11 ಏಕದಿನ 12 ಟಿ20 ಪಂದ್ಯಗಳನ್ನಡಿದ್ದಾರೆ. 2019ರ ಅಕ್ಟೋಬರ್​ನಿಂದ ರಾಷ್ಟ್ರೀಯ ತಂಡದ ಪರ ಕಡೇ ಬಾರಿಗೆ ಆಡಿದ್ದರು.