ಮುಲ್ತಾನ್: ವಿಶ್ವ ನಂ.1 ಬ್ಯಾಟರ್ ಹಾಗೂ ನಾಯಕ ಬಾಬರ್ ಅಜಮ್ (151 ರನ್, 131 ಎಸೆತ, 14 ಬೌಂಡರಿ, 4 ಸಿಕ್ಸರ್), ಇಫ್ತಿಕರ್ ಅಹ್ಮದ್ (109* ರನ್, 71 ಎಸೆತ, 11 ಬೌಂಡರಿ, 4 ಸಿಕ್ಸರ್) ಬಿರುಸಿನ ಶತಕದ ನೆರವಿನಿಂದ ಜಂಟಿ-ಆತಿಥೇಯ ಪಾಕಿಸ್ತಾನ ತಂಡ ಏಷ್ಯಾಕಪ್ ಏಕದಿನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ಎದುರು 238 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಬುಧವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ 6 ವಿಕೆಟ್‌ಗೆ 342 ರನ್ ಪೇರಿಸಿತು. ಪಾಕ್ ಪರ ಐದನೇ ವಿಕೆಟ್‌ಗೆ ಜತೆಯಾದ ಬಾಬರ್ ಅಜಮ್ ಹಾಗೂ ಇಫ್ತಿಕರ್ 214 ರನ್‌ಗಳ ಭರ್ಜರಿ ಜತೆಯಾಟವಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ಬಾಬರ್ 19ನೇ ಶತಕ ಸಿಡಿಸಿದರೆ, ಇಫ್ತಿಕರ್ 67 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದರು. ಅಂತಿಮ 8 ಓವರ್‌ಗಳಲ್ಲಿ ನೇಪಾಳ ಬೌಲರ್‌ಗಳನ್ನು ದಂಡಿಸಿ ಪಾಕ್ 114 ರನ್ ಕಸಿಯಿತು. ಪ್ರತಿಯಾಗಿ ಪಾಕಿಸ್ತಾನದ ಸಂಘಟಿತ ಬೌಲಿಂಗ್ ದಾಳಿಗೆ ಕುಸಿದ ನೇಪಾಳ ತಂಡ 23.4 ಓವರ್‌ಗಳಲ್ಲಿ ಕೇವಲ 104 ರನ್‌ಗಳಿಗೆ ಸರ್ವಪತನ ಕಂಡಿತು.
ನೇಪಾಳ ಪರ ಕುಶಾಲ್ (8) ಹಾಗೂ ಆಸ್ೀ ಶೇಕ್ (5) ವಿಕೆಟ್ ಕಿತ್ತ ಶಾಹೀನ್ ಷಾ ಅಫ್ರಿದಿ ಮೊದಲ ಓವರ್‌ನಲ್ಲೇ ಆಘಾತ ನೀಡಿದರು. ಆರ್ೀ ಶೇಕ್ (26) ಹಾಗೂ ಸೊಂಪಾಲ್ ಕಮಿ (28) ಕೆಲ ಹೊತ್ತು ಪ್ರತಿರೋಧ ತೋರಿದರು. ಸ್ಪಿನ್ನರ್ ಶಾದಾಬ್ ಖಾನ್ (27ಕ್ಕೆ 4) ದಾಳಿಗೆ ಮಧ್ಯಮ ಕ್ರಮಾಂಕ ದಿಢೀರ್ ಕುಸಿಯಿತು.
ಪಾಕಿಸ್ತಾನ: 6 ವಿಕೆಟ್‌ಗೆ 342 (ಖರ್ 15, ಇಮಾಮ್ ಉಲ್ ಹಕ್ 5, ಬಾಬರ್ ಅಜಮ್ 151, ರಿಜ್ವಾನ್ 44, ಇಫ್ತಿಕರ್ 109, ಸೊಂಪಾಲ್ 85ಕ್ಕೆ 2). ನೇಪಾಳ: 23.4 ಓವರ್‌ಗಳಲ್ಲಿ 104 (ಕುಶಾಲ್ 8, ಆಸ್ೀ 5, ಆರ್ೀ 28, ಸೊಂಪಾಲ್ 28, ಗುಲ್ಶಾನ್ 13, ಕರಣ್ 7*, ಶಾದಬ್ 27ಕ್ಕೆ 4, ಶಾಹೀನ್ ಷಾ ಅಫ್ರಿದಿ 27ಕ್ಕೆ 2, ಹ್ಯಾರಿಸ್ 16ಕ್ಕೆ2).