ಕ್ರೀಡೆ

ಭಾರತದ ಮೇಲೆ ಪಾಕ್​ ದಾಳಿ; ದೆಹಲಿ, ಪಂಜಾಬ್ ನಡುವಿನ​ ಪಂದ್ಯ ಅರ್ಧಕ್ಕೆ ಸ್ಥಗಿತ| Ipl-2025

Ipl-2025| ಪಾಕಿಸ್ತಾನದಿಂದ ಭಾರತದ ಮೇಲೆ ವಾಯು ದಾಳಿ ಹಿನ್ನೆಲೆ ದೆಹಲಿ  ಹಾಗೂ ಪಂಜಾಬ್ ನಡುವಿನ​ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಸ್ಟೇಡಿಯಂನಿಂದ ಹೊರಹೋಗಲು ಪ್ರೇಕ್ಷಕರಿಗೆ ಸೂಚನೆ ನೀಡಲಾಗಿದೆ.

ಭಾರತದ ಮೇಲೆ ಪಾಕಿಸ್ತಾನ ದಾಳಿ ಯತ್ನದ ಬೆನ್ನಲ್ಲೇ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್ ಪಂದ್ಯವನ್ನು ರದ್ದು ಮಾಡಲಾಗಿದೆ. ಪಂದ್ಯ ನಡೆಯುತ್ತಿದ್ದಾಗಲೇ ಅರ್ಧದಲ್ಲೇ ರದ್ದು ಮಾಡಿ ಗ್ರೌಂಡ್‌‌ನಲ್ಲಿದ್ದ ಆಟಗಾರರು ಹಾಗೂ ಪ್ರೇಕ್ಷಕರು ಈ ಕೂಡಲೇ ಕ್ರೀಡಾಂಗಣ ತೊರೆಯುವಂತೆ ಸೇನೆ ಆದೇಶಿಸಿದೆ.