ನವದೆಹಲಿ: ಪಾಕಿಸ್ತಾನದ ಎಡಗೈ ವೇಗಿ ವಹಾಬ್ ರಿಯಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ವಿದಾಯ ೋಷಿಸಿದ್ದು, ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಉತ್ತಮ ಜರ್ನಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವತ್ತಿ ಹೊಂದಲು ಬಯಸಿದ್ದು, ನನಗೆ ಬೆಂಬಲವಾಗಿ ನಿಂತ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಕೋಚ್, ಮೆಂಟರ್ ಹಾಗೂ ತಂಡದ ಸಹ ಆಟಗಾರರಿಗೆ ಧನ್ಯವಾದಗಳು, ್ರಾಂಚೈಸಿ ಕ್ರಿಕೆಟ್ ಅತ್ಯಂತ ರೋಮಾಂಚನಕಾರಿ ಕ್ಷಣಗಳು ಎಂದು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಬರೆದುಕೊಂಡಿದ್ದಾರೆ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ವಿಶ್ವದ ಕೆಲವು ಅತ್ಯುತ್ತಮ ಪ್ರತಿಭೆಗಳ ವಿರುದ್ಧ ಸ್ಪರ್ಧಿಸುವಾಗ ಪ್ರೇಕ್ಷಕರನ್ನು ರಂಜಿಸಲು ಮತ್ತು ಪ್ರೇರೇಪಿಸಲು ಆಶಿಸುತ್ತೇನೆ ಎಂದು 38 ವರ್ಷದ ವೇಗದ ಬೌಲರ್ ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಪದಾರ್ಪಣೆಯ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ರಿಯಾಜ್ ಈ ಸಾಧನೆ ಮಾಡಿದ ಪಾಕಿಸ್ತಾನದ 9ನೇ ಬೌಲರ್ ಎನಿಸಿದ್ದರು. 2011ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಐದು ವಿಕೆಟ್ ಗಳಿಸಿದ್ದರು.
ಪಾಕ್ ಪರ 27 ಟೆಸ್ಟ್, 91 ಏಕದಿನ ಹಾಗೂ 36 ಟಿ20 ಪಂದ್ಯಗಳನ್ನಾಡಿರುವ ರಿಯಾಜ್ ಕ್ರಮವಾಗಿ 83, 120 ಮತ್ತು 34 ವಿಕೆಟ್ ಕಬಳಿಸಿದ್ದಾರೆ. 2020ರ ಬಳಿಕ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಲರಾಗಿದ್ದರು.