ಕ್ರೀಡೆ

ಈ ಸಲದ ಯುಎಸ್​ ಓಪನ್​ ಅಮ್ಮಂದಿರ ಗ್ರಾಂಡ್​ ಸ್ಲಾಂ!

ನ್ಯೂಯಾರ್ಕ್​: ಯುಎಸ್​ ಓಪನ್​ ಗ್ರಾಂಡ್​ ಸ್ಲಾಂ ಟೂರ್ನಿಯ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಈ ಬಾರಿ ದಾಖಲೆಯ 10 ಅಮ್ಮಂದಿರು ಕಣಕ್ಕಿಳಿದಿದ್ದಾರೆ. ಈ ಪೈಕಿ 18ನೇ ಶ್ರೇಯಾಂಕಿತೆ ವಿಕ್ಟೋರಿಯಾ ಅಜರೆಂಕಾ ಉನ್ನತ ರ್ಯಾಂಕ್​ ಹೊಂದಿರುವ ಅಮ್ಮ ಆಗಿದ್ದಾರೆ.

ಡೆನ್ಮಾರ್ಕ್​ನ ಕ್ಯಾರೊಲಿನ್​ ವೋಜ್ನಿಯಾಕಿ 2 ಮಕ್ಕಳ ತಾಯಿಯಾದ ಬಳಿಕ ಈ ಬಾರಿ ಮರಳಿದ್ದರೆ, ಯೂಕ್ರೇನ್​ನ ಎಲಿನಾ ಸ್ವಿಟೋಲಿನಾ ತಾಯ್ತನದ ಬಿಡುವಿನ ಬಳಿಕ ಕಳೆದ ಫ್ರೆಂಚ್​ ಓಪನ್​ನಲ್ಲಿ ಮರಳಿ ಕಣಕ್ಕಿಳಿದಿದ್ದರು. ಮಾಜಿ ವಿಶ್ವ ನಂ. 1 ಡಬಲ್ಸ್​ ಆಟಗಾರ್ತಿ ಜೆಕ್​ ಗಣರಾಜ್ಯದ ಬಾಬೋರ್ರಾ ಸ್ಟ್ರೈಕೋವಾ ಟೂರ್ನಿಯಲ್ಲಿ ಮರಳಿ ಕಣಕ್ಕಿಳಿಯುತ್ತಿರುವ ಮತ್ತೋರ್ವ ಪ್ರಮುಖ ಅಮ್ಮನಾಗಿದ್ದಾರೆ.

ಅಮೆರಿಕದ ಟೇಲರ್​ ಟೌನ್​ಸೆಂಡ್​, ಮಾಜಿ ವಿಶ್ವ ನಂ. 2 ವೆರಾ ಜ್ವೊನರೇವಾ, ಜರ್ಮನಿಯ ತತ್ಜನಾ ಮರಿಯಾ, ರೊಮೇನಿಯಾದ ಪ್ಯಾಟ್ರಿಕಾ ಮರಿಯಾ ಟಿಗ್​, ರಷ್ಯಾದ ಮಾರ್ಗರಿಟಾ ಬೆಟೋವಾ ಇತರ ಅಮ್ಮಂದಿರು.