ಕ್ರೀಡೆ

ಪುಣೆಯಲ್ಲಿ ಇಂದು ಹರಿಣಗಳಿಗೆ ಕಿವೀಸ್ ಚಾಲೆಂಜ್: ರನ್ ಹೊಳೆ ಹರಿಯುವ ನಿರೀಕ್ಷೆ

ಪುಣೆ: ಆಸ್ಟ್ರೇಲಿಯಾ ಎದುರು ವೀರೋಚಿತ ಸೋಲು ಕಂಡಿರುವ ನ್ಯೂಜಿಲೆಂಡ್ ಹಾಗೂ ಪಾಕ್ ಎದುರು ರೋಚಕ ಗೆಲುವು ಕಂಡಿರುವ ದಕ್ಷಿಣ ಆಫ್ರಿಕಾ ತಂಡಗಳು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬುಧವಾರ ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್ ತಂಡ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆಲವು ಸಾಧಿಸಿ 8 ಅಂಕ ಕಲೆಹಾಕಿದ್ದರೆ, ದಕ್ಷಿಣ ಆಫ್ರಿಕಾ ಇಷ್ಟೇ ಪಂದ್ಯಗಳನ್ನಾಡಿ 5ರಲ್ಲಿ ಜಯ ಸಾಧಿಸಿ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ಹರಿಣಗಳ ಸೆಮೀಸ್ ಸ್ಥಾನವನ್ನು ಬಹುತೇಕ ಖಚಿತಪಡಿಸಲಿದ್ದರೆ, ನ್ಯೂಜಿಲೆಂಡ್ ತಂಡ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ. ಟೂರ್ನಿಯಲ್ಲಿ ಉಭಯ ತಂಡಗಳ ಬ್ಯಾಟರ್‌ಗಳು ಭರ್ಜರಿ ಾರ್ಮ್‌ನಲ್ಲಿದ್ದು ಬೌಲರ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ. ಎಡಗೈ ಹೆಬ್ಬೆರಳಿನ ಗಾಯದಿಂದ ಬಳಲುತ್ತಿರುವ ಕೇನ್ ವಿಲಿಯಮ್ಸನ್ ಚೇತರಿಸಿಕೊಂಡಿದ್ದು, ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿರುವುದರಿಂದ ಆಫ್ರಿಕಾ ಎದುರು ಕಣಕ್ಕಿಳಿಯುವ ಸಾಧ್ಯತೆಗಳಿವೆ.

ರನ್‌ಪ್ರವಾಹದ ನಿರೀಕ್ಷೆ: ಆಫ್ರಿಕಾ-ಕಿವೀಸ್ ಬ್ಯಾಟರ್‌ಗಳು ಟೂರ್ನಿಯಲ್ಲಿ ಭರ್ಜರಿ ಾರ್ಮ್‌ನಲ್ಲಿದ್ದು, ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಜತೆಗೆ ಅಷ್ಟೇ ಉತ್ತಮ ಬೌಲಿಂಗ್ ವಿಭಾಗವನ್ನೂ 2 ತಂಡಗಳು ಹೊಂದಿವೆ. ವಿಶ್ವಕಪ್‌ನಲ್ಲಿ ಮೂರು ಶತಕ ಸಿಡಿಸಿರುವ ಕ್ವಿಂಟನ್ ಡಿಕಾಕ್ ಹರಿಣಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜತೆಗೆ ಇತರ ಬ್ಯಾಟರ್‌ಗಳ ಉಪಯುಕ್ತ ಕೊಡುಗೆ ತಂಡಕ್ಕೆ ಬಲ ತುಂಬಿದೆ. ಹೆನ್ರಿಕ್ ಕ್ಲಾಸೆನ್, ಏಡೆನ್ ಮಾರ್ಕ್ರಮ್, ರಸ್ಸೀ ವಾನ್ ಡೆ ಡುಸೆನ್ ಅವರನ್ನು ಕಟ್ಟಿಹಾಕುವುದು ಕಿವೀಸ್ ಬೌಲರ್‌ಗಳಿಗೆ ಸವಾಲೆನಿಸಿದೆ. ಇನ್ನು ಕಿವೀಸ್ ಪರ ಬೆಂಗಳೂರು ಮೂಲದ ರಚಿನ್ ರವೀಂದ್ರ (406) ಚೊಚ್ಚಲ ಐಸಿಸಿ ಟೂರ್ನಿಯಲ್ಲಿ ಭರವಸೆ ಮೂಡಿಸಿದ್ದಾರೆ. ಅನುಭವಿ ಡೆರಿಲ್ ಮಿಚೆಲ್, ಹಿಂದಿನ ಪಂದ್ಯದಲ್ಲಿ ಹೋರಾಟ ನಡೆಸಿದ ಜೇಮ್ಸ್ ನೀಶಾಮ್ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ನೀಡಿದ್ದಾರೆ. ಆದರೆ 2 ತಂಡದ ನಾಯಕರು ಇದುವರೆಗೆ ಟೂರ್ನಿಯಲ್ಲಿ ಗಮರ್ನಾಹ ಪ್ರದರ್ಶನ ನೀಡುವಲ್ಲಿ ವಿಲವಾಗಿದ್ದಾರೆ. ಹಿಂದಿನ ಐದು ಏಕದಿನ ಮುಖಾಮುಖಿಗಳಲ್ಲಿ ನ್ಯೂಜಿಲೆಂಡ್ ಕ್ಲೀನ್‌ಸ್ವೀಪ್ ಸಾಧಿಸಿದೆ.

ಏಕದಿನ ಮುಖಾಮುಖಿ-71

ನ್ಯೂಜಿಲೆಂಡ್- 25

ದ.ಆಫ್ರಿಕಾ- 41

ರದ್ದು- 5

ವಿಶ್ವಕಪ್ ಮುಖಾಮುಖಿ - 8

ನ್ಯೂಜಿಲೆಂಡ್- 6

ದ.ಆಫ್ರಿಕಾ- 2

ಆರಂಭ: ಮಧ್ಯಾಹ್ನ 2

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್