ಕ್ರೀಡೆ

ರೌಂಡ್​ ಆಫ್​ 16ನಿಂದ ಹೊರಬಿದ್ದ ಮೇರಿ ಕೋಂ; ಪದಕದ ಆಸೆ ನಿರಾಸೆ

ಟೋಕಿಯೋ : ಒಲಿಂಪಿಕ್ಸ್​​ನಲ್ಲಿ ಎರಡನೇ ಪದಕದ ಆಕಾಂಕ್ಷೆ ಹೊಂದಿದ್ದ ಭಾರತದ ಚ್ಯಾಂಪಿಯನ್ ಬಾಕ್ಸರ್​ ಮೇರಿ ಕೋಂ ಅವರು ಇಂದು ಫ್ಲೈವೇಯ್ಟ್​ ವಿಭಾಗದ ರೌಂಡ್ ಆಫ್​ 16 ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಆರು ಬಾರಿ ವರ್ಲ್ಡ್​ ಚ್ಯಾಂಪಿಯನ್ ಆಗಿರುವ 38 ವರ್ಷದ ಮೇರಿ ಕೋಂ, ಕೊಲಂಬಿಯಾದ 32 ವರ್ಷದ ಬಾಕ್ಸರ್​ ಇನ್​ಗ್ರಿಟ್​ ವಾಲೆಂಷಿಯ ಎದುರು 2-3 ಅಂಕಗಳೊಂದಿಗೆ ಪರಾಜಯ ಅನುಭವಿಸಿದರು.

2012 ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಮೇರಿ ಕೋಂ ಅವರು ಈ ಬಾರಿ ಚಿನ್ನದ ಪದಕವೇ ತಮ್ಮ ಗುರಿ ಎಂದು ಹೇಳಿದ್ದರು. ಭಾರೀ ಸೆಣಸಾಟದ ನಂತರ ಮೇರಿ ಕೋಂ ಅವರನ್ನು ಸೋಲಿಸಿದ ಇನ್​ಗ್ರಿಟ್​, 2018ರ ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು ಎನ್ನಲಾಗಿದೆ. (ಏಜೆನ್ಸೀಸ್)