ಕ್ರೀಡೆ

RCB ತಂಡದಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ಓಕೆ! ಪ್ರಾಂಚೈಸಿ ಜತೆ ಮ್ಯಾಕ್ಸಿ ಅರ್ಧ ಗಂಟೆ ಮಾತುಕತೆ, ಏನೀ ಗುಟ್ಟು?

ಬೆಂಗಳೂರು: IPL 2025ರ ಹರಾಜಿಗೂ ಮುಂಚಿತವಾಗಿ ಮ್ಯಾಕ್ಸ್​​ವೆಲ್​ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಾದ ಬಳಿಕ ಆರ್​ಸಿಬಿ(RCB) ಪ್ರಾಂಚೈಸಿ ಜತೆ ಅರ್ಧ ಗಂಟೆ ದೂರವಾಣಿ ಕರೆಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಸ್ಟಾರ್​ ಬ್ಯಾಟರ್​ ಮ್ಯಾಕ್ಸ್​ವೆಲ್, ತಾವು ನಡೆಸಿದ ಸಂಭಾಷಣೆ ಏನು ಎಂಬುದನ್ನು ಇದೀಗ​ ಬಹಿರಂಗಪಡಿಸಿದ್ದಾರೆ.

ಇನ್ನು ಈ ಬಾರಿ ಆರ್​ಸಿಬಿ, ನಾಲ್ಕು ಪ್ರಮುಖ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಕೊನೆಯದಾಗಿ ವಿರಾಟ್​ ಕೊಹ್ಲಿ, ರಜಿತ್​ ಪಾಟಿದಾರ್, ಯಶ್​ ದಯಾಳ್ ಅವರನ್ನು​ ಮಾತ್ರ ಉಳಿಸಿಕೊಂಡಿದೆ. ಮುಂದಿನ ಸೀಸನ್​ಗೆ ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಯಾರೆಲ್ಲಾ ಆರ್​ಸಿಬಿಗೆ ಮರಳಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ. ಕಳೆದ ಕೆಲ ಸೀಸನ್​​ಗಳಲ್ಲಿ ಮಾಕ್ಸ್​ವೆಲ್​ ಉತ್ತಮ ಪ್ರದರ್ಶನ ನೀಡದ ಕಾರಣ ಮತ್ತು ಬ್ಯಾಟಿಂಗ್​ ವೈಫಲ್ಯದಿಂದ ಅವರನ್ನು ತಂಡದಿದಂದ ಕೈಬಿಡಲು ಕಾರಣ ಎನ್ನಲಾಗಿದೆ. ಇದೆಲ್ಲದರ ನಡುವೆ ಇದೀಗ ಪ್ರಾಂಚೈಸಿ ಜತೆ ನಡೆಸಿದ ಮಾತುಕತೆಯನ್ನು ಮ್ಯಾಕ್ಸಿ ಹಂಚಿಕೊಂಡಿದ್ದಾರೆ.

''ಮೊದಲಿಗೆ ಮೊ ಬೊಬಾಟ್​ ಮತ್ತು ಆ್ಯಂಡಿ ಫ್ಲವರ್​ ಅವರು ನನಗೆ ಕರೆ ಮಾಡಿದರು. ಇದು ಜೂಮ್​ ಮೀಟಿಂಗ್​ ಆಗಿತ್ತು. ತಂಡದಿಂದ ನಿಮ್ಮನ್ನು ಕೈಬಿಡಲಾಗುತ್ತಿದೆ ಎಂದು ಹೇಳಿದರು. ನಾನು ಇದಕ್ಕೆ ಓಕೆ ಎಂದೆ. ಬಳಿಕ ತಂಡದಲ್ಲಿನ ಉತ್ತಮ ಪ್ರದರ್ಶನ ಮತ್ತು ಆಟದ ಸ್ಟ್ರಾಟರ್ಜಿ ಬಗ್ಗೆ ಮಾತನಾಡಿದೆವು. ಅರ್ಧಗಂಟೆಗೂ ಹೆಚ್ಚು ಕಾಲ ಅವರೊಟ್ಟಿಗೆ ಮಾತನಾಡಿದ್ದು ನನಗೆ ಸಂತೋಷ ತಂದಿದೆ. ಇದೇ ರೀತಿ ಎಲ್ಲ ತಂಡಗಳು ಮಾಡಿದರೆ ಆಟಗಾರರ ಮತ್ತು ಪ್ರಾಂಚೈಸಿ ಜತೆ ಉತ್ತಮ ಸಂಬಂಧ ಏರ್ಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ,(ಏಜೆನ್ಸೀಸ್).