ಕ್ರೀಡೆ

19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾರತ ಕಿರಿಯರಿಗೆ ಇಂದು ಕಿವೀಸ್​ ಸವಾಲು

ಬ್ಲೋಮ್​ ಾಂಟೇನ್​: ಹ್ಯಾಟ್ರಿಕ್​ ಗೆಲುವಿನೊಂದಿಗೆ ಬೀಗುತ್ತಿರುವ ಐದು ಬಾರಿ ಚಾಂಪಿಯನ್​ ಭಾರತ ಕಿರಿಯರ ತಂಡ 19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯ ಸೂಪರ್​&6 ಹಂತದ ತನ್ನ ಮೊದಲ ಪಂದ್ಯದಲ್ಲಿ ಮಂಗಳವಾರ ನ್ಯೂಜಿಲೆಂಡ್​ ತಂಡದ ಸವಾಲು ಎದುರಿಸಲಿದ್ದು, ಅಜೇಯ ಓಟ ವಿಸ್ತರಿಸುವ ನಿರೀೆಯಲ್ಲಿದೆ.

ಎ ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್​ ಸಿಕ್ಸ್​ಗೆ ಲಗ್ಗೆಯಿಟ್ಟಿರುವ ಭಾರತ ತಂಡ ಲೀಗ್​ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ವಿಭಾಗದಲ್ಲಿ ಸಮಸ್ಯೆ ಎದುರಿಸಿತ್ತು. ಬಳಿಕ ಕಂಬ್ಯಾಕ್​ ಮಾಡಿದ ಉದಯ್​ ಸಹಾರನ್​ ಬಳಗ ಸಂಟಿತ ನಿರ್ವಹಣೆಯೊಂದಿಗೆ ಪ್ಯಾಬಲ್ಯ ಸಾಧಿಸಿದೆ. ಲೀಗ್​ನ ಎಲ್ಲ ಮೂರು ಪಂದ್ಯಗಳನ್ನು ಒಂದೇ ಕ್ರೀಡಾಂಗಣದಲ್ಲಿ ಆಡಿರುವ ಭಾರತ, ನ್ಯೂಜಿಲೆಂಡ್​ ವಿರುದ್ಧವೂ ಅದೇ ಅಂಗಣದಲ್ಲಿ ಆಡುವ ಪ್ರಯೋಜನದ ಲಾಭ ಪಡೆಯುವ ಸಾಧ್ಯತೆಗಳಿವೆ.

ಮುಶೀರ್​ ಖಾನ್​ ಗುಂಪು ಹಂತದ ಪಂದ್ಯಗಳ ನಂತರ ಟೂರ್ನಿಯಲ್ಲಿ ಅತಿಹೆಚ್ಚು ರನ್​ಗಳಿಸಿದ ಮೂರನೇ ಬ್ಯಾಟರ್​ ಆಗಿದ್ದಾರೆ. ಆರಂಭಿಕ ಅರ್ಶಿನ್​ ಕುಲಕರ್ಣಿ, ಉದಯ್​ ಸಹಾರನ್​ ಉತ್ತಮ ಾಮ್​ರ್ನಲ್ಲಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಎಡಗೈ ವೇಗಿ ನಮನ್​ ತಿವಾರಿ,ಎಡಗೈ ಸ್ಪಿನ್ನರ್​ ಸೌಮಿ ಪಾಂಡೆ ಲಯದಲ್ಲಿದ್ದಾರೆ. ಇತ್ತ ನ್ಯೂಜಿಲೆಂಡ್​ ಆಡಿರುವ ಮೂರು ಪಂದ್ಯಗಳಿಂದ ಎರಡು ಗೆಲುವುಗಳೊಂದಿಗೆ ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ. ಎರಡು ತಂಡಗಳು ಗೆಲುವಿನೊಂದಿಗೆ ಉತ್ತಮ ರನ್​ರೇಟ್​ ಕಾಯ್ದುಕೊಳ್ಳುವ ನಿರೀೆಯಲ್ಲಿ ಕಣಕ್ಕಿಳಿಯಲಿವೆ.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​