ಬೆಲ್‌ಗ್ರೇಡ್: ಕೋವಿಡ್-19ರಿಂದ ಸುಧಾರಿಸಿಕೊಂಡಿರುವ ವಿಶ್ವ ನಂ.1 ನೊವಾಕ್ ಜೋಕೊವಿಕ್ ಟೆನಿಸ್ ಕೋರ್ಟ್‌ಗೆ ವಾಪಸಾಗಿದ್ದಾರೆ. ನೊವಾಕ್ ಟೆನಿಸ್ ಕೇಂದ್ರದಲ್ಲಿ ಜೋಕೊ ಅಭ್ಯಾಸ ಆರಂಭಿಸಿರುತ್ತಿರುವುದಾಗಿ ಮುಖ್ಯಕೋಚ್ ಬೊರಿಸ್ ಬೋಜ್ನಾಕೊವಿಕ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕಳೆದ ತಿಂಗಳು ಏಡ್ರಿಯಾ ವಲ್ಡ್ ಟೂರ್ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿದ್ದ ವೇಳೆ ಸ್ವತಃ ಜೋಕೊವಿಕ್, ಅವರ ಗೆಳತಿ ಸೇರಿದಂತೆ ಹಲವು ಆಟಗಾರರು ಕೋವಿಡ್-19ರ ಸೋಂಕಿಗೆ ತುತ್ತಾಗಿದ್ದರು.
ಪ್ರದರ್ಶನ ಟೆನಿಸ್ ಟೂರ್ನಿಯಿಂದ ಕೋವಿಡ್-19ರ ಹರಡಿದ್ದರಿಂದ ಸೆರ್ಬಿಯಾ ಆಟಗಾರ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಬಳಿಕ ಜೋಕೊ ಕ್ಷಮೆಯಾಚಿಸಿದ್ದರು. ಆದರೆ, ಸೆರ್ಬಿಯಾ ಪ್ರಧಾನಿ ಸೇರಿದಂತೆ ಹಲವು ಟೆನಿಸ್ ಆಟಗಾರರು ಜೋಕೊ ಬೆಂಬಲಕ್ಕೆ ನಿಂತಿದ್ದರು. ಜೋಕೊ ಮಾಡಿರುವ ತಪ್ಪಾದರೂ ಏನು, ಅವರೊಬ್ಬರನ್ನೇ ಟಾರ್ಗೆಟ್ ಮಾಡುವುದು ಒಳ್ಳೆದಲ್ಲ ಎಂದು ಫ್ರೆಂಚ್‌ನ ಹಿರಿಯರ ಆಟಗಾರ ಗಿಲ್ಲೆಸ್ ಸಿಮೊನ್ ಹೇಳಿದ್ದರು.