ನ್ಯೂಯಾಕ್: ಹಾಲಿ ಚಾಂಪಿಯನ್‌ಗಳಾದ ಸೆರ್ಬಿಯಾದ ನೊವಾಕ್ ಜೋಕೊವಿಕ್, ಅಮೆರಿಕದ ಕೋಕೋ ಗೌಫ್ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಜಯದ ಆರಂಭ ಕಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್, ನಾರ್ವೆಯ ಕ್ಯಾಸ್ಪರ್ ರುಡ್, ರಷ್ಯಾದ ಆಂಡ್ರೆ ರುಬ್ಲೆವ್, ಒಲಿಂಪಿಕ್ಸ್ ಕಂಚು ವಿಜೇತ ಲೊರೆಂಜೊ ಮುಸ್ಸೆಟ್ಟಿ ಶುಭಾರಂಭ ಕಂಡರೆ, ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ, ಮ್ಯಾಡಿಸನ್ ಕೀಯ್ಸ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ, ಜೆಕ್ ಗಣರಾಜ್ಯದ ಬಾರ್ಬೋರಾ ಕ್ರೆಜ್ಸಿಕೋವಾ ಗೆಲುವು ದಾಖಲಿಸಿದ ಪ್ರಮುಖರೆನಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಜೋಕೊವಿಕ್ 6-2, 6-2,6-4 ನೇರ ಸೆಟ್‌ಗಳಿಂದ ಅರ್ಹತಾ ಸುತ್ತಿನ ಆಟಗಾರ ರಾಡು ಅಲ್ಬೋಟ್ ಎದುರು ಸುಲಭ ಗೆಲುವು ದಾಖಲಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಕಣಕ್ಕಿಳಿದಿರುವ ಜೋಕೋ ಹಾಲಿ ಋತುವಿನ ಮೊದಲ ಹಾಗೂ ದಾಖಲೆಯ 25ನೇ ಗ್ರಾಂಡ್ ಸ್ಲಾಂ ಕನಸಿನ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದರು. ಇದರೊಂದಿಗೆ ನ್ಯೂಯಾರ್ಕ್‌ನಲ್ಲಿ ಗರಿಷ್ಠ ಪಂದ್ಯ ಗೆದ್ದ ಸ್ವಿಜರ್ಲೆಂಡ್‌ನ ದಿಗ್ಗಜ ರೋಜರ್ ೆಡರರ್ (89) ದಾಖಲೆಯನ್ನು ಸರಿಗಟ್ಟಿದರು. ಒಲಿಂಪಿಕ್ಸ್‌ನಲ್ಲಿ ಮಣ್ಣಿನ ಅಂಕಣದಲ್ಲಿ ಆಡಿದ ಬಳಿಕ ಹಾರ್ಡ್ ಕೋರ್ಟ್‌ನಲ್ಲಿ ಆಡುವುದು ತುಸು ಕಠಿಣ ಎನಿಸಿತು. ಕಳೆದ ಆರು ತಿಂಗಳಿನಿಂದ ನಾನು ಈ ಅಂಗಣದಲ್ಲಿ ಆಡಿಲ್ಲ ಎಂದು 37 ವರ್ಷದ ಜೋಕೋ ಪಂದ್ಯದ ಬಳಿಕ ನುಡಿದರು. 4 ಬಾರಿ ಯುಎಸ್ ಚಾಂಪಿಯನ್ ಜೋಕೊವಿಕ್ ಮುಂದಿನ ಸುತ್ತಿನಲ್ಲಿ ದೇಶಬಾಂಧವ ಲಸೊಲೊ ಡಿ ಜೆರಿ ಅವರನ್ನು ಎದುರಿಸಲಿದ್ದಾರೆ.
ಸಬಲೆಂಕಾ ಗೆಲುವಿನ ಆರಂಭ: ಅವಳಿ ಗ್ರಾಂಡ್ ಸ್ಲಾಂ ಚಾಂಪಿಯನ್, ಬೆಲಾರಸ್‌ನ ಅರಿನಾ ಸಬಲೆಂಕಾ ಮಹಿಳಾ ಸಿಂಗಲ್ಸ್‌ನ ಆರಂಭಿಕ ಪಂದ್ಯದಲ್ಲಿ 6-3, 6-3 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಪ್ರಿಸಿಲ್ಲಾ ಹಾನ್ ಎದುರು ಸುಲಭ ಗೆಲುವು ದಾಖಲಿಸಿದರು. ಕೋಕೋ ಗ್ೌ 6-2, 6-0 ರಿಂದ ್ರಾನ್ಸ್‌ನ ವರ್ವಾರಾ ಗ್ರಾಚೆವಾ ಅವರನ್ನು ಮಣಿಸಿದರೆ, ಮೂರು ಬಾರಿ ೈನಲಿಸ್ಟ್ ಅಜರೆಂಕಾ 3-6, 6-1, 6-1 ರಿಂದ ಯೂಕ್ರೇನ್‌ನ ಯೂಲಿಯಾ ಸ್ಟಾರ್ಡೊಬ್ಟ್ಸೆವಾ ವಿರುದ್ಧ ಹೋರಾಟಯುತ ಗೆಲುವು ಒಲಿಸಿಕೊಂಡರು. ವಿಂಬಲ್ಡನ್ ಚಾಂಪಿಯನ್ ಬಾರ್ಬೋರಾ ಕ್ರೆಜ್ಸಿಕೋವಾ 7-6, 6-2ರಿಂದ ಸ್ಪೇನ್‌ನ ಮರಿನಾ ರಿಬೆರಾ ಅವರನ್ನು ಪರಾಭವಗೊಳಿಸಿದರು. 14ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಯ್ಸ, ಎಮ್ಮಾ ನವೋರಾ,ಪೌಲ್ ಬಡೋಸಾ ಸಹ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.