ಕ್ರೀಡೆ

ಸಬಲೆಂಕಾ, ಜೋಕೋ ಮುನ್ನಡೆ:ಮೂರನೇ ಸುತ್ತಿಗೇರಿದ ಅಜರೆಂಕಾ

ನ್ಯೂಯಾರ್ಕ್: ಎರಡನೇ ಶ್ರೇಯಾಂಕಿತ, ಸೆರ್ಬಿಯಾದ ನೊವಾಕ್ ಜೋಕೊವಿಕ್,ವಿಶ್ವ ನಂ.2 ಅರಿನಾ ಸಬಲೆಂಕಾ, ಹಾಲಿ ಚಾಂಪಿಯನ್ ಕೋಕೋ ಗ್ೌ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೇರಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಲೊರೆಂಜೊ ಮುಸ್ಸೆಟ್ಟಿ, 6ನೇ ಶ್ರೇಯಾಂಂಕಿತ ಆಂಡ್ರೆ ರುಬ್ಲೆವ್, ಬೆನ್ ಶೆಲ್ಟನ್ ಮಹಿಳಾ ವಿಭಾಗದಲ್ಲಿ ಮ್ಯಾಡಿಸನ್ ಕೀಯ್ಸ, ವಿಕ್ಟೋರಿಯಾ ಅಜರೆಂಕಾ, ಎಲಿನಾ ಸ್ವಿಟೋಲಿನಾ ಹಾಗೂ ಒಲಿಂಪಿಕ್ಸ್ ಚಿನ್ನ ವಿಜೇತೆ ಝೆಂಗ್ ಕ್ವಿನ್ವೆನ್ ಮುಂದಿನ ಸುತ್ತಿಗೇರಿದ್ದಾರೆ. ಹಾಲಿ ವಿಂಬಲ್ಡನ್ ಚಾಂಪಿಯನ್ ಬಾರ್ಬೊರಾ ಕ್ರೆಜ್ಸಿಕೋವಾ ಆಘಾತಕಾರಿ ಸೋಲುಂಡಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 24 ಗ್ರಾಂಡ್ ಸ್ಲಾಂ ವಿಜೇತ ನೊವಾಕ್ ಜೋಕೊವಿಕ್ 6-4, 6-4, 2-0 ರಿಂದ ದೇಶಬಾಂಧವ ಲಾಸ್ಲೋ ಡಿಜೆರೆ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹಿಂದೆ ಸರಿದರು. ಜೋಕೊವಿಕ್ ಸಹ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇದರ ನಡುವೆಯೂ ಯುಎಸ್ ಓಪನ್‌ನಲ್ಲಿ 90ನೇ ಗೆಲುವು ದಾಖಲಿಸಿದರು. ಇದರೊಂದಿಗೆ ಎಲ್ಲ ನಾಲ್ಕು ಗ್ರಾಂಡ್ ಸ್ಲಾಂಗಳಲ್ಲಿ ಕನಿಷ್ಠ 90 ಪಂದ್ಯ ಜಯಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೋಕೊವಿಕ್ ಶುಕ್ರವಾರ ಮೂರನೇ ಸುತ್ತಿನಲ್ಲಿ 28ನೇ ಶ್ರೇಯಾಂಕಿತ ಅಲೆಕ್ಸಿ ಪಾಪಿರಿನ್ ಅವರನ್ನು ಎದುರಿಸಲಿದ್ದಾರೆ.

4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್ 6-4, 7-5, 6-1 ರಿಂದ ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ ನೇರ ಸೆಟ್‌ಗಳ ಗೆಲುವು ಒಲಿಸಿಕೊಂಡರು. ನಾರ್ವೆಯ ಕ್ಯಾಸ್ಪರ್ ರುಡ್ 6-4, 6-2, 2-6, 7-6 ರಿಂದ 2 ಗಂಟೆ 55 ನಿಮಿಷಗಳ ಕಠಿಣ ಹೋರಾಟದಲ್ಲಿ ್ರಾನ್ಸ್‌ನ ಗೇಲ್ ಮೂನ್‌ಫೀಲ್ಸ್ ಅವರನ್ನು ಪರಾಭವಗೊಳಿಸಿದರೆ, 6ನೇ ಶ್ರೇಯಾಂಕಿತ ಆಂಡ್ರೆ ರುಬ್ಲೆವ್ 6-4, 7-5, 6-1,6-2, 6-2 ರಿಂದ ್ರಾನ್ಸ್ ಅರ್ಥರ್ ರಿಂಡ್‌ಕ್ನೆಚ್ ವಿರುದ್ಧ ಆಘಾತದಿಂದ ಪಾರಾದರು. ಇಟಲಿಯ ಮುಸ್ಸೆಟ್ಟಿ 3-6, 6-4, 6-4, 6-2, 7-5 ರಿಂದ ಸೆರ್ಬಿಯಾದ ಮಿಯೋಮಿರ್ ಕೆಕ್‌ಮನೊವಿಕ್ ಎದುರು 3 ಗಂಟೆ 47 ನಿಮಿಷಗಳ ಸುದೀರ್ಘ ಸೆಣಸಾಟದಲ್ಲಿ ಗೆಲುವು ಒಲಿಸಿಕೊಂಡರು.

ಸ್ವಿಟೋಲಿನಾ, ಸಬಲೆಂಕಾ ಸುಲಭ ಜಯ: ಹಾಲಿ ರನ್ನರ್ ಅಪ್, ಬೆಲಾರಸ್‌ನ ಅರಿನಾ ಸಬಲೆಂಕಾ ಮಹಿಳಾ ಸಿಂಗಲ್ಸ್‌ನಲ್ಲಿ ಇಟಲಿಯ ಲೂಸಿಯಾ ಬೊರೊಜೆಟ್ಟಿ ಎದುರು 6-3,6-1 ರಿಂದ ಸುಲಭ ಗೆಲುವು ದಾಖಲಿಸಿದರು. ಇದರೊಂದಿಗೆ 2018 ರಿಂದ ಸತತವಾಗಿ ಯುಎಸ್ ಓಪನ್ ಮೂರನೇ ಸುತ್ತಿಗೇರಿದ ಸಾಧನೆ ಮಾಡಿದರು. ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮೈಗ್ರೇನ್ ನಡುವೆಯೂ 6-1, 6-4 ನೇರ ಸೆಟ್‌ಗಳಿಂದ ಕ್ಲಾರಾ ಬುರೆಲ್ ಎದುರು ಜಯ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪಂದ್ಯದ ನಡುವೆಯೂ ವೈದ್ಯರ ತಪಾಸಣೆಗೆ ಒಳಗಾದ ಅಜರೆಂಕಾ ಅಂಗಣದಲ್ಲಿ ಕಣ್ಣೀರು ಹಾಕಿ ರಕ್ತದೊತ್ತಡ ಪರೀಕ್ಷೆಗೊಳಪಟ್ಟ ಬಳಿಕ ಆಟ ಮುಂದುವರಿಸಿದರು. ಚೀನಾದ ಝೆಂಗ್ ಕ್ವಿನ್ವೆನ್ 6-7, 6-1, 6-2 ರಿಂದ ಎರ‌್ರಿಕಾ ಆಂಡ್ರೀವಾ ಅವರನ್ನು ಮಣಿಸಿ ಮೂರನೇ ಸುತ್ತಿಗೇರಿದರೆ, ಯೂಕ್ರೇನ್‌ನ ಎಲಿನಾ 6-1,6-2 ರಿಂದ ದೇಶಬಾಂಧವೆ ಅನ್ಹೆಲಿನಾ ಕಲಿನಿನಾ ವಿರುದ್ಧ ಗೆದ್ದು ಬೀಗಿದರು. ಸ್ಪೇನ್‌ನ ಪೌಲ್ ಬಡೋಸಾ 6-3, 7-6 ರಿಂದ ಅಮೆರಿಕದ ಟೇಲರ್ ಟೌನ್ಸೆಂಡ್ ಅವರನ್ನು ಮಣಿಸಿದರು.