RCB: ಮಂಗಳವಾರ (ಜೂನ್ 03) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಇದರೊಂದಿಗೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ:8 ಸಾವಿರ ರೂ. ಬೇಕಾ or ಡೇಟಿಂಗ್ ಮಾಡ್ತೀಯಾ? ಯುವಕನ ಆಯ್ಕೆ ಕೇಳಿ ವಿದೇಶಿ ಯುವತಿ ಶಾಕ್! Foreign Woman
ಇನ್ನು ಪಂದ್ಯ ಗೆಲ್ಲುತ್ತಿದಂತೆ ಮೈದಾನದಲ್ಲೇ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾವುಕರಾದರು. 18 ವರ್ಷದ ಕನಸು ನನಸಾಗುತ್ತಿದ್ದಂತೆ ನೆಲಕ್ಕೆ ಬಿದ್ದು ಮಗುವಿನಂತೆ ಅತ್ತು ಬಿಟ್ಟರು. ಇದೀಗ ಈ ಭಾವುಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಗೆದಿದ್ದಕ್ಕೆ ಆಟಗಾರರು ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ಜತೆಗೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಭಾವುಕರಾಗಿದ್ದಾರೆ.
ಹಾರ್ದಿಕ್ ಭಾವುಕ ಪೋಸ್ಟ್
ಹಾರ್ದಿಕ್ ಸಹೋದರ ಕೃನಾಲ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರ್‌ಸಿಬಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಈ ಕ್ಷಣವನ್ನು ಆನಂದಿಸಿದ ಹಾರ್ದಿಕ್ ತುಂಬಾ ಭಾವುಕರಾದರು ಮತ್ತು ಅಳಲು ಪ್ರಾರಂಭಿಸಿದರು. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃನಾಲ್‌ಗಾಗಿ ವಿಶೇಷ ಸಂದೇಶವನ್ನು ಹಂಚಿಕೊಂಡರು. ಹಾರ್ದಿಕ್ "ನಾನು ಅಳುತ್ತಿದ್ದೇನೆ, ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಬರೆದಿದ್ದಾರೆ.
ಕೃನಾಲ್ ಅದ್ಭುತ ಬೌಲಿಂಗ್
ಅಂತಿಮ ಪಂದ್ಯದಲ್ಲಿ ಕೃನಾಲ್ ಅದ್ಭುತ ಬೌಲಿಂಗ್ ಮಾಡಿದರು. 17 ವರ್ಷಗಳ ನಂತರ ತಂಡವು ತನ್ನ ಮೊದಲ ಟ್ರೋಫಿಯನ್ನು ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 4 ಓವರ್‌ಗಳಲ್ಲಿ ಕೇವಲ 17 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದ ಕೃನಾಲ್ 'ಪಂದ್ಯಶ್ರೇಷ್ಠ' ಪ್ರಶಸ್ತಿಯನ್ನೂ ಪಡೆದರು.