ಕ್ರೀಡೆ

40 ಟೆಸ್ಟ್​ ಆಡಿದ ಮಾತ್ರಕ್ಕೆ ದಿಗ್ಗಜ ಎಂದು ಕರೆಯುವುದಿಲ್ಲ! ಬುಮ್ರಾ ಬಗ್ಗೆ ಪಿಯೂಷ್ ಚಾವ್ಲಾ ನೇರ ನುಡಿ | Legend

ನವದೆಹಲಿ: ಇಂದು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ 44 ಓವರ್​ ಅಂತ್ಯಕ್ಕೆ 180 ರನ್​ ಕಲೆಹಾಕಿದೆ. ಇನ್ನು ಮೊದಲ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ ಜಸ್ಪ್ರಿತ್​ ಬುಮ್ರಾ ಪಡೆ, ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿತು. ಮೊದಲ ಮ್ಯಾಚ್​ನಲ್ಲಿ ಕ್ರಿಕೆಟ್ ಪ್ರಿಯರು ಹಾಗೂ ಮಾಜಿ ಕ್ರಿಕೆಟಿಗರ ಗಮನಸೆಳೆದ ಸ್ಟಾರ್​ ವೇಗಿ ಜಸ್ಪ್ರಿತ್ ಬುಮ್ರಾ, 8 ವಿಕೆಟ್​ಗಳನ್ನು ಕಬಳಿಸಿ, ಪ್ಲೇಯರ್​ ಆಫ್​ ದಿ ಮ್ಯಾಚ್​ ಪಟ್ಟಕ್ಕೆ ಅರ್ಹರಾದರು. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿರುವ ಬುಮ್ರಾ ಬಗ್ಗೆ ಟೀಮ್ ಇಂಡಿಯಾದ ಮಾಜಿ ಬೌಲರ್​ ಪಿಯೂಷ್ ಚಾವ್ಲಾ ನೇರವಾಗಿ ತಮ್ಮ ಅಭಿಪ್ರಾಯವನ್ನು (Legend Word) ವ್ಯಕ್ತಪಡಿಸಿದ್ದಾರೆ.

ಬುಮ್ರಾ ಕೇವಲ 41 ಟೆಸ್ಟ್ ಪಂದ್ಯಗಳಲ್ಲಿ 181 ವಿಕೆಟ್ ಕಬಳಿಸಿದ್ದಾರೆ. 40 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡ ಬಳಿಕ ಅವರನ್ನು ದಿಗ್ಗಜ ಎಂದು ಕರೆಯುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಈ ವಿಷಯದಲ್ಲಿ ಟೀಮ್ ಇಂಡಿಯಾದ ಸ್ಟಾರ್​ ವೇಗಿ ಜಸ್ಪ್ರಿತ್ ಮಾತ್ರ ವಿಭಿನ್ನ ಎಂದು ನಾನು ಭಾವಿಸುತ್ತೀನಿ. ಬುಮ್ರಾ ಬೌಲಿಂಗ್​ಗೆ ಆಡುವುದು ಅಷ್ಟು ಸುಲಭದ ಮಾತಲ್ಲ. ಯಾವುದೇ ಬ್ಯಾಟರ್‌ಗಳು ಸಾಮಾನ್ಯವಾಗಿ ಬ್ಯಾಕ್‌ ಫುಟ್‌ನಲ್ಲಿ ಬ್ಯಾಟ್‌ ಮಾಡುತ್ತಾರೆ. ಏಕೆಂದರೆ, ಅವರ ಎಸೆತಗಳು ಲೆಂತ್‌ ಕಡಿಮೆ ಎಂದು ಯೋಚಿಸಿ, ಹೀಗೆ ಆಡಲು ಮುಂದಾಗುತ್ತಾರೆ. ಆದರೆ ಅವರು ಬಾಲ್​ನ ಪಿಚ್ ಮಾಡುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದು ನಿಜಕ್ಕೂ ಗಮನಾರ್ಹ ಎಂದಿದ್ದಾರೆ.

2024ರಲ್ಲಿ ಕ್ಯಾಲೆಂಡರ್​ನಲ್ಲಿ 50 ಟೆಸ್ಟ್ ವಿಕೆಟ್​ಗಳನ್ನು ಪೂರೈಸಿದ ಮೊದಲ ಬೌಲರ್ ಎಂಬ ಪಟ್ಟವನ್ನು ಜಸ್ಪ್ರೀತ್ ಬುಮ್ರಾ ಸ್ವೀಕರಿಸಿದ್ದಾರೆ. ಅವರ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್​ ಮಾಡ್ತಾರೆ. ವಿಷಯಗಳನ್ನು ಸರಳವಾಗಿಸುತ್ತಾರೆ ಮತ್ತು ಬ್ಯಾಟರ್‌ಗಳಿಗೆ ಸುಲಭವಾಗುವಂತ ಎಸೆತಗಳನ್ನು ಎಂದಿಗೂ ಹಾಕುವುದಿಲ್ಲ ಎಂದು ಚಾವ್ಲಾ ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).