ಕ್ರೀಡೆ

ಯಾವ ಆಟಗಾರನು ಆಟಕ್ಕಿಂತ ದೊಡ್ಡವರಲ್ಲ: ಕೊಹ್ಲಿ, ರೋಹಿತ್​ ಕೈಬಿಡುವಂತೆ ಬಿಸಿಸಿಐಗೆ ಸೂಚನೆ!| BCCI

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್​​ -ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ ಹೀನಾಯ ಸೋಲಿನ ಪರಿಣಾಮ ಆಯ್ಕೆ ಸಮಿತಿ(BCCI) ಮುಂದಿನ ಟೆಸ್ಟ್​ ಸರಣಿಗಳಿಗೆ ತಂಡ ಆಯ್ಕೆ ಮಾಡಲು ಸಂದಿಗ್ಧತೆ ಪರಿಸ್ಥಿತಿಯಲ್ಲಿ ಸಿಲುಕಿದೆ.

ಹೌದು, ಸ್ಟಾರ್ ಬ್ಯಾಟ್​ಮ್ಯಾನ್ಸ್​ಗಳಿಂದ ತುಂಬಿದ ಟೀಮ್​ ಇಂಡಿಯಾ ತಂಡದಲ್ಲಿ ಯಾರನ್ನು ಕೈಬಿಡಬೇಕು ಅಥವಾ ಆಯ್ಕೆ ಮಾಡಬೇಕು ಎಂದು ಆಲೋಚಿಸುವಂತಾದೆ. ಅಲ್ಲದೆ, ಹಿರಿಯ ಬ್ಯಾಟ್ಸ್​ಮ್ಯಾನ್​ಗಳಾದ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಕಳೆಪೆ ಬ್ಯಾಟಿಂಗ್​ ಪ್ರದರ್ಶನದಿಂದ ಟೀಮ್ ಮತ್ತು ಆಟಗಾರರ ವಿರುದ್ದ ಭಾರಿ ಟೀಕೆ ವ್ಯಕ್ತವಾಗಿವೆ. ವ್ಯಕ್ತವಾಗುತ್ತಲೆ ಇವೆ. ಈ ನಡುವೆ ನಾಯಕ ರೋಹಿತ್​ ತಮ್ಮ ನಿವೃತ್ತಿ ಬಗ್ಗೆ ಮನಸ್ಸು ಮಾಡಿಲ್ಲ ಎಂದು ಖಡಕ್​ ಆಗಿ ಹೇಳಿದ್ದಾರೆ. ಇದರಿಂದ ಬಿಸಿಸಿಐ ಮಂಡಳಿ ದುರ್ಬಲವಾಗಿದೆಯೇ ಎಂದು ಅನುಮಾನಗಳು ಮೂಡಿವೆ.

ಇದೆಲ್ಲದರ ನಡುವೆ ಬಿಸಿಸಿಐ ಅಧಿಕಾರಿಯೊಬ್ಬರು ‘’ ತಂಡಕ್ಕೆ ಸ್ಟಾರ್​ ಆಟಗಾರರು ಬೇಕಿಲ್ಲ. ಯಾವ ಆಟಗಾರನು ಆಟಕ್ಕಿಂತ ದೊಡ್ಡವರಲ್ಲ. ಕೊಹ್ಲಿ ಮತ್ತು ರೋಹಿತ್​ ಅವರನ್ನು ತಂಡದಿಂದ ಕೈಬಿಡುವಂತೆ ಮಂಡಳಿಯ ಹೊಸ ಪ್ರಧಾನ ಕಾರ್ಯದರ್ಶಿ ದೇವಜಿತ್​ ಸೈಕಿಯಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್​ ಅರ್ಗಕರ್​ ಅವರಿಗೆ ಹೇಳಿದ್ದಾರೆ. ಅಲ್ಲದೆ, ’ತಂಡಕ್ಕೆ ಕಟ್ಟುನಿಟ್ಟಾದ ಬಲವಾದ ಸಂದೇಶ’ ಕಳಿಸುವಂತೆ ಮನವಿ ಮಾಡಿದ್ದಾರೆ’’ ಎಂದು ವರದಿಯಾಗಿದೆ.

ಹೊಸ ತಂಡ ಕಟ್ಟುವ ಮೂಲಕ ಆಟಗಾರರಿಗೆ ಮತ್ತು ಭಾರತಕ್ಕೆ ಹೊಸ ಸಂದೇಶ ಕೊಡಬೇಕು. ಬಿಸಿಸಿಐ ದೇಶದಲ್ಲಿ ಆಟವನ್ನು ಮುನ್ನೆಡಸಬೇಕು ಸ್ಟಾರ್​ ಆಟಗಾರರನ್ನು ಅಲ್ಲ ಆಟಕ್ಕೆ ಏನೋ ಬೇಕು ಅದನ್ನು ಮಾಡಿಬೇಕು. ಬಲವಾದ ಸಂದೇಶ ನೀಡಿಬೇಕು ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.

ಭಾರತ ತನ್ನ ಮುಂದಿನ ಟೆಸ್ಟ್​ ಪಂದ್ಯಕ್ಕೆ ಜೂನ್​ ಅಂತಿಮದಲ್ಲಿ ಇಂಗ್ಲೆಂಡ್​ ಪ್ರವಾಸ ಮಾಡಲಿದೆ. (ಏಜೆನ್ಸೀಸ್​)