ಬೆಂಗಳೂರು: ಬಾಂಗ್ಲಾದೇಶ ಸೇರಿದಂತೆ ಮುಂಬರುವ ಅಂತಾರಾಷ್ಟ್ರೀಯ ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವೆ ದಿನ ಕಳೆದಂತೆ ಪೈಪೋಟಿ ಹೆಚ್ಚಾಗುತ್ತಿದ್ದು, ಬ್ಯಾಟರ್ಗಳು ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಸಿಡಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆಯುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್, ಅನುಭವಿ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ಗೆ ಮಾತ್ರ ರನ್ ಗಳಿಕೆಗೆ ಪರದಾಟ ಮುಂದುವರೆದಿದ್ದು, ಇದಕ್ಕೆ ಹಾಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸಾಕ್ಷಿಯಾಗಿದೆ.
ದುಲೀಪ್ ಟ್ರೋಫಿಯಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ಎ ತಂಡದ ಪರ ಆಡುತ್ತಿರುವ ರಾಹುಲ್ 111 ಎಸೆತಗಳನ್ನು ಎದುರಿಸಿ 37 ರನ್ ಗಳಿಸಿದರು. ರಾಹುಲ್ ರನ್ ಗಳಿಸಲು ಪರದಾಡುತ್ತಿರುವ ಮತ್ತು ಔಟಾದ ರೀತಿ ಕಂಡು ಫ್ಯಾನ್ಸ್ ಕಿಡಿಕಾರಿದ್ದು, ಕ್ರಿಕೆಟಿಗನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳ ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಗೆ ರಾಹುಲ್ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿದ್ದು, ಅವರ ಫಾರ್ಮ್ ನೋಡಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
ಬ್ಯಾಟಿಂಗ್ ಪಿಚ್ನಲ್ಲಿ ಯಾವುದೇ ಉದ್ಧೇಶವಿಲ್ಲದೇ, ಯಾವುದೇ ರನ್ ಗಳಿಸದೆ ಇರುವವರು ಇವರೇ ನೋಡಿ. ಯಾರಾದರೂ ಕ್ರಿಕೆಟ್ ನೋಡುವುದನ್ನು ನಿಲ್ಲಿಸಬೇಕೆಂದರೆ ದಯವಿಟ್ಟು ಅವರಿಗೆ ಕೆ.ಎಲ್. ರಾಹುಲ್ ಬ್ಯಾಟಿಂಗ್ ವೈಖರಿಯನ್ನು ಒಮ್ಮೆ ತೋರಿಸಿ ನೀವು ಖಿನ್ನತೆಗೆ ಹೋಗುತ್ತೀರಾ. ಈ ವಿಚಾರದಲ್ಲಿ ನಾನು ಬೆಟ್ ಮಾಡಲು ಸಿದ್ದ. ಸರ್ಫರಾಜ್ ಅಂತಹವರು ಈ ಪಿಚ್ನಲ್ಲಿ ಟಿ20 ಕ್ರಿಕೆಟ್ ಆಡುತ್ತಿದ್ದರೆ. ರಾಹುಲ್ನಂತಹವರು ಈ ಪಿಚ್ ತುಂಬಾ ಸ್ಲೋ ಇದ್ದು, ರನ್ ಗಳಿಸಲು ಕಷ್ಟವಾಗುತ್ತದೆ ಎಂದು ರಾಹುಲ್ ನನಗೆ ತೋರಿಸಿಕೊಟ್ಟರು ಎಂದು ಕ್ರೀಡಾಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.