ಆಕ್ಲೆಂಡ್: ಶನಿವಾರ ಇಲ್ಲಿನ ಈಡನ್ ಪಾರ್ಕ್ನಲ್ಲಿ ನಡೆದ ಪ್ರವಾಸಿ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ಸಹಾಯಕ ಕೋಚ್ ಲ್ಯುಕ್ ರೊಂಚಿ ಫೀಲ್ಡಿಂಗ್ ಮಾಡುವ ಮೂಲಕ ಗಮನ ಸೆಳದರು.
ಟೀಮ್ ಸೌಥಿ ಅನಾರೋಗ್ಯ ಕಾರಣ ಅವರ ಸ್ಥಾನವನ್ನು ತುಂಬಲು ಯಾವೊಬ್ಬ ಕಿವೀಸ್ ಆಟಗಾರನು ಫಿಟ್ ಆಗಿರದೇ ಇದ್ದುದ್ದರಿಂದ ಲ್ಯುಕ್ ರೊಂಚಿ ಅವರೇ ಬದಲಿ ಫೀಲ್ಡರ್ ಆಗಿ ಕ್ರೀಡಾಂಗಣಕ್ಕೆ ಇಳಿದರು.
ಸೌಥಿ ಗಾಯಗೊಂಡಿದ್ದರಿಂದ ಸ್ಕಾಟ್ ಕುಗ್ಗೆಲಿನ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಫೀಲ್ಡಿಂಗ್ಗೆ ಇಳಿಸಬಹುದಿತ್ತು. ಆದರೆ, ಅವರಿಬ್ಬರಿಗೂ ಜ್ವರ ಮತ್ತು ಉದರ ಸಂಬಂಧ ತೊಂದರೆ ಇದ್ದ ಕಾರಣದಿಂದಾಗಿ ಬದಲಿ ಫೀಲ್ಡರ್ ಆಗಿ ಕ್ರೀಡಾಂಗಣಕ್ಕೆ ಇಳಿಸಲು ಸಾಧ್ಯವಾಗಲಿಲ್ಲ.
ಅನಾರೋಗ್ಯ ಕಾರಣ ಸೌಥಿ ಪ್ರಾರಂಭದಲ್ಲೇ ತಮ್ಮ 10 ಓವರ್ಗಳನ್ನು ಎಸೆದು ವಿಶ್ರಾಂತಿಗಾಗಿ ಕ್ರೀಡಾಂಗಣ ತ್ಯಜಿಸಿದರು. ಆದರೆ, ಅವರ ಸ್ಥಾನ ತುಂಬಲು ಯಾವೋಬ್ಬ ಆಟಗಾರರನು ಇಲ್ಲದಿದ್ದಾಗ ತಂಡದ ಸಹಾಯಕ ಕೋಚ್ ಲ್ಯುಕ್ ರೊಂಚಿ ಅವರೇ ಮೈದಾನಕ್ಕೆ ಇಳಿದರು.
ಅಂದಹಾಗೆ 38 ವರ್ಷದ ಲ್ಯುಕ್ ರೊಂಚಿ ಅವರು ವಿಕೆಟ್ ಕೀಪರ್ ಹಾಗೂ ಬ್ಯಾಟ್ಮನ್ ಆಗಿದ್ದು, ಕೊನೆಯ ಬಾರಿಗೆ 2017ರಲ್ಲಿ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದರು. ಈಗ ಕೋಚ್ ಆಗಿದ್ದಾರೆ.
ಇದನ್ನೂ ಓದಿ: ಎರಡನೇ ಏಕದಿನ ಪಂದ್ಯದಲ್ಲಿ ಟೇಲರ್ ಅರ್ಧ ಶತಕ; ಟೀಮ್ ಇಂಡಿಯಾಕ್ಕೆ 274 ರನ್ ಗೆಲುವಿನ ಗುರಿ ನೀಡಿದ ಕಿವೀಸ್ ಪಡೆ
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಭಾರತ ವಿರುದ್ಧ ಕಿವೀಸ್ ಎರಡನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳಲ್ಲಿ 2-0 ಅಂತರದಿಂದ ಮುನ್ನೆಡೆ ಕಾಯ್ದುಕೊಳ್ಳುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. (ಏಜೆನ್ಸೀಸ್)