ಬರ್ಮಿಂಗ್ಹ್ಯಾಂ: ಆರಂಭಿಕ ಫಿನ್ ಅಲೆನ್ (83 ರನ್, 53 ಎಸೆತ, 4 ಬೌಂಡರಿ, 6 ಸಿಕ್ಸರ್), ಗ್ಲೆನ್ ಫಿಲಿಪ್ಸ್ (69 ರನ್, 34 ಎಸೆತ, 5 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮತ್ತು ಸಂಟಿತ ಬೌಲಿಂಗ್ ನಿರ್ವಹಣೆಯ ನೆರವಿನಿಂದ ನ್ಯೂಜಿಲೆಂಡ್ ತಂಡ 3ನೇ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 74 ರನ್ಗಳಿಂದ ಸೋಲುಣಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ಗೆ ತಿರುಗೇಟು ನೀಡಿರುವ ನ್ಯೂಜಿಲೆಂಡ್, 4 ಪಂದ್ಯಗಳ ಸರಣಿಯಲ್ಲಿ ತನ್ನ ಹಿನ್ನಡೆಯನ್ನು 1-2ಕ್ಕೆ ಇಳಿಸಿಕೊಂಡಿದೆ.
ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ನ್ಯೂಜಿಲೆಂಡ್ 5 ವಿಕೆಟ್ಗೆ 202 ರನ್ ಪೇರಿಸಿತು. ಪ್ರತಿಯಾಗಿ ವೇಗಿ ಕೈಲ್ ಜೇಮಿಸನ್ (23ಕ್ಕೆ 3), ಸ್ಪಿನ್ನರ್ ಇಶ್ ಸೋಧಿ (33ಕ್ಕೆ 3) ಮತ್ತು ನಾಯಕ ಟಿಮ್ ಸೌಥಿ (30ಕ್ಕೆ 2) ದಾಳಿಗೆ ಕುಸಿದ ಇಂಗ್ಲೆಂಡ್ 18.3 ಓವರ್ಗಳಲ್ಲಿ 128 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಸರಣಿಯ ನಿರ್ಣಾಯಕ 4ನೇ ಹಾಗೂ ಅಂತಿಮ ಟಿ20 ಪಂದ್ಯ ಮಂಗಳವಾರ ನಾಟಿಂಗ್ಹ್ಯಾಂನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್: 5 ವಿಕೆಟ್ಗೆ 202 (ಫಿನ್ ಅಲೆನ್ 83, ಕಾನ್ವೇ 9, ಫಿಲಿಪ್ಸ್ 69, ಅಟ್ಕಿನ್ಸನ್ 31ಕ್ಕೆ 2). ಇಂಗ್ಲೆಂಡ್: 18.3 ಓವರ್ಗಳಲ್ಲಿ 128 (ಬೇರ್ಸ್ಟೋ 12, ಮಲಾನ್ 2, ಬ್ರೂಕ್ 8, ಬಟ್ಲರ್ 40, ಮೊಯಿನ್ ಅಲಿ 26, ಲಿವಿಂಗ್ಸ್ಟೋನ್ 2, ಜೇಮಿಸನ್ 23ಕ್ಕೆ 3, ಸೋಧಿ 33ಕ್ಕೆ3, ಸೌಥಿ 30ಕ್ಕೆ 2). ಪಂದ್ಯಶ್ರೇಷ್ಠ: ಫಿನ್ ಅಲೆನ್.