ಕ್ರೀಡೆ

ನ್ಯೂಜಿಲೆಂಡ್​-ಇಂಗ್ಲೆಂಡ್​ ಟೆಸ್ಟ್​ ಸರಣಿ ಹೊಸ ಹೆಸರು ನಾಮಕರಣ; ಹೀಗಿದೆ ಟ್ರೋಫಿ ವಿಶೇಷತೆ...

ಕೆಸ್ಟ್​ಚರ್ಚ್​: ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ನ ದಿವಂಗತ ದಿಗ್ಗಜ ಬ್ಯಾಟರ್​ಗಳಾದ ಮಾರ್ಟಿನ್​ ಕ್ರೋವ್​ ಮತ್ತು ಗ್ರಹಾಂ ಥೋರ್ಪೆ ಸ್ಮರಣಾರ್ಥವಾಗಿ ಉಭಯ ತಂಡಗಳ ಟೆಸ್ಟ್​ ಸರಣಿಗೆ ಕ್ರೋವ್​-ಥೋರ್ಪೆ ಟ್ರೋಫಿ ಎಂದು ನಾಮಕರಣ ಮಾಡಲಾಗಿದೆ.

ಉಭಯ ತಂಡಗಳ ನಡುವೆ ಗುರುವಾರದಿಂದ 3 ಪಂದ್ಯಗಳ ಸರಣಿಯ ನಡೆಯಲಿದ್ದು, ಈ ಹೆಸರಿನ ಟ್ರೋಫಿಗಾಗಿ ನಡೆಯಲಿರುವ ಮೊದಲ ಸರಣಿ ಎನಿಸಿದೆ. ಮಾರ್ಟಿನ್​ ಕ್ರೋವ್​ ಕಿವೀಸ್​ ಪರ 77 ಟೆಸ್ಟ್​ಗಳಲ್ಲಿ 17 ಶತಕಗಳ ಸಹಿತ 5,444 ರನ್​ ಬಾರಿಸಿದ್ದರೆ, ಥೋರ್ಪೆ ಇಂಗ್ಲೆಂಡ್​ ಪರ 100 ಟೆಸ್ಟ್​ಗಳಲ್ಲಿ 16 ಶತಕಗಳ ಸಹಿತ 6,744 ರನ್​ ಗಳಿಸಿದ್ದರು.

ಉಭಯ ಆಟಗಾರರ ಕುಟುಂಬದವರು ನೀಡಿರುವ ಅವರಿಬ್ಬರ ಬ್ಯಾಟ್​ಗಳಿಂದ ಟ್ರೋಫಿಯನ್ನು ರಚಿಸಲಾಗಿದೆ. ಕ್ರೋವ್​ 1994ರಲ್ಲಿ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಮತ್ತು ಥೋರ್ಪೆ 1997ರಲ್ಲಿ ಆತಿಥೇಯ ಕಿವೀಸ್​ ವಿರುದ್ಧ ಸತತ 2 ಶತಕ ಸಿಡಿಸಿದ ಬ್ಯಾಟ್​ ಇದಾಗಿದೆ.