ಕ್ರೀಡೆ

ಆರ್‌ಸಿಬಿ ತಂಡಕ್ಕೆ ಮತ್ತೊಬ್ಬ ಹೊಸ ಆಟಗಾರ

raghukittur

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಭಾಗ-2ಕ್ಕೆ ದಿನಗಣನೆ ಆರಂಭಗೊಂಡಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಕೆಲ ಆಟಗಾರರು ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಈಗಾಗಲೇ ಸಿಎಸ್‌ಕೆ, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅರಬ್ ರಾಷ್ಟ್ರ ತಲುಪಿವೆ. ಮತ್ತೊಂದೆಡೆ, ಕೆಲ ಫ್ರಾಂಚೈಸಿಗಳು ಇನ್ನು ಅಂತಿಮ ತಂಡ ಪ್ರಕಟಿಸಿಲ್ಲ. ಇದೀಗ ಆರ್‌ಸಿಬಿ ಕೂಡ ತಂಡವನ್ನು ಅಂತಿಮಗೊಳಿಸಿದೆ ಇಂಗ್ಲೆಂಡ್ ವೇಗಿ ಜಾರ್ಜ್ ಗಾರ್ಟನ್ ಐಪಿಎಲ್ 14ನೇ ಆವೃತ್ತಿಯ ಭಾಗ-2ರಲ್ಲಿ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್‌ಸನ್ ಬದಲಿಗೆ ಆಡಲು ಆರ್‌ಸಿಬಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಎಡಗೈ ವೇಗದ ಬೌಲರ್ ಗಾರ್ಟನ್, ಇದುವರೆಗೆ ಆಡಿರುವ 38 ಟಿ20 ಪಂದ್ಯಗಳಿಂದ 44 ವಿಕೆಟ್ ಕಬಳಿಸಿದ್ದಾರೆ. ಗಾರ್ಟನ್, ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್‌ಸಿಬಿ ತಂಡ ಐಪಿಎಲ್ ಭಾಗ-2ಕ್ಕೆ ಮಾಡಿಕೊಂಡ 4ನೇ ಬದಲಾವಣೆ ಇದಾಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ತಬರೇಜ್ ಶಮ್ಸಿ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡರು. ಸದ್ಯ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಶಮ್ಸಿ ನಂ.1 ಸ್ಥಾನದಲ್ಲಿದ್ದು, 39 ಟಿ20 ಪಂದ್ಯಗಳಿಂದ 45 ವಿಕೆಟ್ ಕಬಳಿಸಿದ್ದಾರೆ. 2016ರಲ್ಲಿ ಆರ್‌ಸಿಬಿ ಪರ 4 ಪಂದ್ಯಗಳನ್ನಾಡಿದ್ದರು.