ನವದೆಹಲಿ: ನೆಟ್ ಬೌಲರ್ ಆಗಿ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಬಂಗಾಳದ ಯುವ ವೇಗಿ ಇಶಾನ್ ಪೊರೆಲ್ ಗಾಯಗೊಂಡಿದ್ದಾರೆ. ಇದರಿಂದ ಭಾರತ ತಂಡ ಅಭ್ಯಾಸದ ಅವಧಿಯಲ್ಲಿ ಬೌಲರ್‌ಗಳ ಕೊರತೆ ಎದುರಿಸಲಿದೆ. ಕರೊನಾ ಭೀತಿಯಿಂದಾಗಿ ಭಾರತ ತಂಡ ಸ್ಥಳೀಯ ಬೌಲರ್‌ಗಳ ಸೇವೆಯಿಂದಲೂ ವಂಚಿತವಾಗಿದೆ.
ನೆಟ್ ಅವಧಿಯಲ್ಲಿ ಎದುರಾದ ಸ್ನಾಯುಸೆಳೆತದ ಸಮಸ್ಯೆಯಿಂದಾಗಿ ಅವರು ತವರಿಗೆ ಮರಳಿದ್ದಾರೆ. ಇನ್ನು ಬೆಂಗಳೂರಿನ ಎನ್‌ಸಿಎಗೆ ತೆರಳಿದ ಬಳಿಕ ಅವರ ಗಾಯದ ಗಂಭೀರತೆಯ ಪರಿಶೀಲನೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ನೆಟ್ ಬೌಲರ್ ಆಗಿ ತೆರಳಿದ್ದ ಮತ್ತೋರ್ವ ವೇಗಿ ಟಿ. ನಟರಾಜನ್ ಈಗಾಗಲೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಈಗ ಕಾರ್ತಿಕ್ ತ್ಯಾಗಿ ತಂಡದ ಏಕೈಕ ನೆಟ್ ಬೌಲರ್ ಆಗಿದ್ದಾರೆ. ನೆಟ್ ಬೌಲರ್ ಆಗಿ ಸ್ಥಾನ ಪಡೆದಿದ್ದ ಮತ್ತೋರ್ವ ವೇಗಿ ಕಮಲೇಶ್ ನಾಗರಕೋಟಿ ಐಪಿಎಲ್ ವೇಳೆ ಆದ ಗಾಯದಿಂದಾಗಿ ಆಸೀಸ್‌ಗೆ ತೆರಳಿರಲಿಲ್ಲ. ಇಶಾನ್ ಪೊರೆಲ್ ಐಪಿಎಲ್ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ.