ಕ್ರೀಡೆ

2024ರ ಟಿ20 ವಿಶ್ವಕಪ್​ಗೆ ನೇಪಾಳ, ಓಮನ್​ ಅರ್ಹತೆ; 20ರಲ್ಲಿ 18 ತಂಡಗಳು ಅಂತಿಮ

ಕಾಠ್ಮಂಡು: ನೇಪಾಳ ಮತ್ತು ಓಮನ್​ ತಂಡಗಳು 2024ರಲ್ಲಿ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕದ ಜಂಟಿ ಆಶ್ರಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಗೆ ಅರ್ಹತೆ ಸಂಪಾದಿಸಿದೆ. ನೇಪಾಳದ ಕಾಠ್ಮಂಡುನದಲ್ಲಿ ನಡೆಯುತ್ತಿರುವ ಏಷ್ಯಾ ಅರ್ಹತಾ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸುವ ಮೂಲಕ ಇವೆರಡು ತಂಡಗಳು ಈ ಸಾಧನೆ ಮಾಡಿವೆ.

ಸೆಮಿಫೈನಲ್​ ಪಂದ್ಯದಲ್ಲಿ ಆತಿಥೇಯ ನೇಪಾಳ ತಂಡ ಯುಎಇಗೆ ಸೋಲುಣಿಸಿದರೆ, ಓಮನ್​ ತಂಡ ಬಹರೇನ್​ ಎದುರು ಜಯಿಸಿತು. 2024ರ ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಆಡಲಿದ್ದು, ಇದುವರೆಗೆ 18 ತಂಡಗಳು ಅರ್ಹತೆ ಸಂಪಾದಿಸಿವೆ.

ಇದರಲ್ಲಿ 2 ಆತಿಥೇಯ ದೇಶಗಳ ಜತೆಗೆ ಭಾರತ, ಆಸ್ಟ್ರೆಲಿಯಾ, ಇಂಗ್ಲೆಂಡ್​, ನ್ಯೂಜಿಲೆಂಡ್​, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೆದರ್ಲೆಂಡ್​, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್​, ಸ್ಕಾಟ್ಲೆಂಡ್​, ಪಪುವಾ ನ್ಯೂಗಿನಿ, ಕೆನಡ ತಂಡಗಳು ಸೇರಿವೆ.