- ಕೋಚ್ ನವಲ್ ಸಿಂಗ್ ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ದೂರು
- ಕೋಚ್ ವರ್ತನೆ ಅವಮಾನಕರ ಎಂದು ಸುಮಿತ್ ಅವರಿಗೆ ಬೆಂಬಲ ಸೂಚಿಸಿದ ನೀರಜ್ ಚೋಪ್ರಾ
- ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಪತ್ರ ಬರೆದ ನೀರಜ್ ಚೋಪ್ರಾ ಕಠಿಣ ಕ್ರಮಕ್ಕೆ ಆಗ್ರಹ
Naval Singh Coach Abuse: ಭಾರತೀಯ ಕ್ರೀಡಾ ಲೋಕದಲ್ಲಿ ಕೋಚ್ಗಳಿಂದ ಕಿರುಕುಳ ಮತ್ತು ದೌರ್ಜನ್ಯಕ್ಕೊಳಗಾದ ಸುದ್ದಿ ಈ ಹಿಂದೆ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಹೌದು, 2023ರಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪದ ಮೇಲೆ ದೂರು ಕೊಟ್ಟು ಪ್ರತಿಭಟನೆ ನಡೆಸಿದ್ದರು. ಘಟನೆ ಮಾಸುವ ಮುನ್ನವೇ ಪುರುಷ ಜಾವೆಲಿನ್ ಕ್ರೀಡಾಪಟುಗಳು ಕೋಚ್ ಒಬ್ಬರ ವಿರುದ್ಧ ದೂರು ಕೊಟ್ಟು ಕ್ರಮ ಕೈಗೊಳ್ಳುವಂತೆ Sports Authority of India (SAI) ಮೊರೆ ಹೋಗಿದ್ದಾರೆ.
ಎರೆಡೆರಡು ಬಾರಿ ಪ್ಯಾರಾಲಿಂಪಿಕ್ನಲ್ಲಿ ಚಿನ್ನದ ಪದಕವನ್ನು ಭಾರತಕ್ಕೆ ದಕ್ಕಿಸಿಕೊಟ್ಟ ಸುಮಿತ್ ಆಂಟಿಲ್ ಅವರು ತರಬೇತುದಾರ ನವಲ್ ಸಿಂಗ್ ವಿರುದ್ಧ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಅವಾಚ್ಯ ಶಬ್ಧಗಳಲ್ಲಿ ನಿಂದಿಸುತ್ತಿದ್ದಾರೆ ಎಂದು Sports Authority of India (SAI) ಗೆ ಲಿಖಿತ ದೂರನ್ನು ನೀಡಿದ್ದರು. ಸದ್ಯ ಅವರ ಈ ಹೋರಾಟಕ್ಕೆ ಒಲಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಕೂಡ ಬೆಂಬಲ ನೀಡಿದ್ದಾರೆ.
ಏಪ್ರಿಲ್ 10ರಂದು ಭಾರತದ ಪ್ರಮುಖ ಜಾವೆಲಿನ್ ಕ್ರೀಡಾಪಟುಗಳು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಕೋಚ್ ನವಲ್ ಸಿಂಗ್ ಕುಡಿದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಮತ್ತು ಮಾನಸಿಕ ಕಿರುಕುಳ ನೀಡುವ ಬಗ್ಗೆ ಉಲ್ಲೇಖಿಸಿದ್ದಾರೆ.
ಆಡಿಯೋ ಸಾಕ್ಷಿ ಲಭ್ಯ
ಸುಮಿತ್ ಆಂಟಿಲ್, ನವದೀಪ್ ಸಿಂಗ್, ನೀರಜ್ ಚೋಪ್ರಾ ಹಾಗೂ ಪಾಕಿಸ್ತಾನದ ಅರ್ಷದ್ ನದೀಮ್ ವಿರುದ್ಧ ಅಸಭ್ಯವಾಗಿ ಮಾತನಾಡಿರುವ ಆಡಿಯೋವನ್ನು ಸಾಕ್ಷಿ ಸಮೇತ ಹಂಚಿಕೊಳ್ಳಲಾಗಿದೆ
ಸುಮಿತ್ ಆಂಟಿಲ್ರ ಪತ್ರದಲ್ಲಿ ಏನಿದೆ?
2018-19ರಲ್ಲಿ ನವಲ್ ಸಿಂಗ್ ಬಳಿ ತರಬೇತಿ ಪಡೆದಿದ್ದೆ. ಆದರೆ, ಅವರಿಂದ ಕೋಚಿಂಗ್ ಪಡೆಯುವುದು ನಿಂತ ಮೇಲೆಯೂ ಅವರು ನನ್ನನ್ನು ನಮ್ಮ ಕುಟುಂಬದವರನ್ನು ನಿಂದಿಸೋದು ಬಿಟ್ಟಿಲ್ಲ. ಕುಡಿದ ಅಮಲಿನಲ್ಲಿ ನನಗೆ, ನೀರಜ್ ಭಾಯ್ಗೆ ಹಾಗೂ ನವದೀಪ್ ಅವರ ಕುಟುಂಬಕ್ಕೆ ಕೆಟ್ಟದಾಗಿ ನಿಂದಿಸುತ್ತಾರೆ.
ನನಗೆ ಈ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳೋದು ಅಂದ್ರೆ ಆಗೋದಿಲ್ಲ. ಹೀಗಾಗಿ ಎಲ್ಲದ್ರಿಂದಲೂ ನಾನು ಕೊಂಚ ದೂರವೇ ಇರುತ್ತೇನೆ. ಆದ್ರೀಗ ನನ್ನ ಸಹನೆಯ ಕಟ್ಟೆ ಹೊಡೆದಿದೆ. ಹೀಗಾಗಿ ದೂರು ನೀಡುತ್ತಿದ್ದೇನೆ ಎಂದು ಸುಮಿತ್ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಎಸ್ಎಐ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಯ್, ಸುಮಿತ್ ಆಂಟಿಲ್ ಅವರು ನೀಡಿದ ದೂರು ಸ್ವೀಕರಿಸಲಾಗಿದೆ. ನವಲ್ ಸಿಂಗ್ ಸದ್ಯ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಡಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಈ ವಿಷಯವನ್ನು ಫೆಡರೇಶನ್ ಗಮನಕ್ಕೆ ತರಲಾಗುವುದು. ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ನೀರಜ್ ಚೋಪ್ರಾ ಹೀಗಂದ್ರು
ಕ್ರೀಡೆ ಎಂದರೆ ಘನತೆ, ಶಿಸ್ತು, ದೇಶದ ಗೌರವವನ್ನು ಎತ್ತಿ ಹಿಡಿಯಬೇಕು. ಕೋಚ್ ನವಲ್ ಸಿಂಗ್ ಅವರು ವರ್ತಿಸಿರೋದು ಕೇವಲ ಅನುಚಿತವಲ್ಲ, ಅವು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಭಾರತದ ಪ್ರಮುಖ ಮಹಿಳಾ ಕುಸ್ತಿಪಟುಗಳುಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಗಂಭೀರ ಆರೋಪಗಳನ್ನು ಹೊರಿಸಿ 2023ರಲ್ಲಿ ನೇಶ್ ಫೋಗಟ್, ಸಾಕ್ಷಿ ಮಲಿಕ್, ಮತ್ತು ಬಜರಂಗ್ ಪುನಿಯಾ ದೆಹಲಿಯಲ್ಲಿ ಸುದೀರ್ಘ ಪ್ರತಿಭಟನೆ ನಡೆಸಿದ್ದರು,(ಏಜೆನ್ಸೀಸ್)