ಕ್ರೀಡೆ

ಟಿ-20 ವಿಶ್ವಕಪ್ ಗೆಲ್ಲಬೇಕಾ? ಹಾಗಾದ್ರೆ, ಮೊದಲು ಹೀಗೆ ಮಾಡಿ.. ಕೋಚ್ ದ್ರಾವಿಡ್​ಗೆ ನವಜೋತ್ ಸಿಂಗ್ ಸಿಧು ಸಲಹೆ

ನವದೆಹಲಿ: ಸದ್ಯ ಕ್ರಿಕೆಟ್ ಅಭಿಮಾನಿಗಳ ಕಣ್ಣು ಐಪಿಎಲ್​ ಮೇಲಿದ್ದು, 17ನೇ ಸೀಸನ್​ನ ಟ್ರೋಫಿ ಪಟ್ಟವನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ಮಧ್ಯೆ ಟಿ-20 ವಿಶ್ವಕಪ್ ಟೂರ್ನಿ ಕುರಿತಾದ ಚರ್ಚೆ ತೀವ್ರವಾಗಿದ್ದು, ಟೀಂ ಇಂಡಿಯಾ ಸ್ಕ್ವ್ಯಾಡ್​ನಲ್ಲಿ​ ಯಾರನ್ನೆಲ್ಲಾ ಆಡಿಸಬೇಕು, ಯಾರಿಗೆ ಸ್ಥಾನ ಕೊಡಬೇಕು ಎಂಬುದೇ ದೊಡ್ಡ ಸವಾಲಾಗಿದೆ. 15 ಜನರ ತಂಡವನ್ನು ಪ್ರಕಟಿಸುವುದು ಈಗ ಬಿಸಿಸಿಐ ಸೆಲೆಕ್ಟರ್​​ಗಳ ಜವಾಬ್ದಾರಿಯಾಗಿದ್ದು, ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ.

ಇದೇ ಜೂನ್​ 2ರಿಂದ 29ರವರೆಗೆ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯನ್ನು ಯುಎಸ್​ಎ ಮತ್ತು ವೆಸ್ಟ್​ ಇಂಡೀಸ್​ ಆಯೋಜನೆ ಮಾಡಿದೆ. ಈಗಾಗಲೇ ಟೀಂ ಇಂಡಿಯಾ ಪರ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ ಎಂಬುದರ ಅನಧಿಕೃತ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಅದ್ದೂರಿ ಪ್ರದರ್ಶನ ನೀಡುತ್ತಿರುವ ಆಟಗಾರರ ಮೇಲೆ ಕಣ್ಣಿಟ್ಟಿರುವ ಬಿಸಿಸಿಐಗೆ, ಆಯ್ಕೆ ಪ್ರಕ್ರಿಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇನ್ನು ಟಿ-20 ವಿಶ್ವಕಪ್​ ಟೂರ್ನಿಗೆ ಟೀಂ ಇಂಡಿಯಾದ ಸ್ಕ್ವ್ಯಾಡ್​ ಬಗ್ಗೆ ಚರ್ಚೆ ಪ್ರಾರಂಭಿಸಿರುವ ಕ್ರಿಕೆಟ್ ದಿಗ್ಗಜರ ಪೈಕಿ ನವಜೋತ್ ಸಿಂಗ್ ಸಿಧು ಹೆಚ್ಚು ಸುದ್ದಿಯಾಗಿದ್ದು, ಕೋಚ್ ರಾಹುಲ್ ದ್ರಾವಿಡ್​ ಅವರಿಗೆ ನೇರ ಸಲಹೆಯೊಂದನ್ನು ನೀಡಿದ್ದಾರೆ. ವಿಶ್ವಕಪ್ ಗೆಲ್ಲಬೇಕು ಎಂದರೆ 5 ವಿಕೆಟ್​ ತೆಗೆಯುವ ಸಾಮರ್ಥ್ಯವಿರುವ ಬೌಲಿಂಗ್ ಸ್ಪೆಷಲಿಸ್ಟ್​​ನ ಆಯ್ದುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ಸದ್ಯ ನವಜೋತ್ ಸಿಂಗ್ ಕೊಟ್ಟ ಸಲಹೆಯನ್ನು ನೆಟ್ಟಿಗರು ಸಹ ಒಪ್ಪಿದ್ದು, ಟೀಂ ಇಂಡಿಯಾ ಸ್ಕ್ವ್ಯಾಡ್​ಗೆ ಬಲಿಷ್ಠ ಬೌಲಿಂಗ್ ಲೈನ್​ ಅಗತ್ಯವಿದೆ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).