ರಾಷ್ಟ್ರೀಯ ಅಂತರ ಶಾಲಾ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಗೆದ್ದ ವಿದ್ಯಾ ಸೌಧ ತಂಡ. 
ಕ್ರೀಡೆ

ವಿದ್ಯಾ ಸೌಧ ಪಬ್ಲಿಕ್​ ಸ್ಕೂಲ್​ಗೆ ವಾಲಿಬಾಲ್​ ಪ್ರಶಸ್ತಿ

ಬೆಂಗಳೂರು: ಪೀಣ್ಯ ಮೊದಲ ಹಂತದಲ್ಲಿರುವ ವಿದ್ಯಾ ಸೌಧ ಪಬ್ಲಿಕ್​ ಸ್ಕೂಲ್​ ತಂಡ ಅಮೃತಾಯ ಸೆಂಟಲ್​ ಸ್ಕೂಲ್​ ಇತ್ತೀಚೆಗೆ ಆಯೋಜಿಸಿದ್ದ 6ನೇ ಮುಕ್ತ ರಾಷ್ಟ್ರೀಯ ಅಂತರ ಶಾಲಾ ಚಾಂಪಿಯನ್​ಷಿಪ್​ನ (National Inter School Volleyball Championship ) ವಾಲಿಬಾಲ್​ ಸ್ಪರ್ಧೆಯಲ್ಲಿ 10, 12, 14 ವಯೋಮಿತಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
14 ವಯೋಮಿತಿ ಬಾಲಕರ ವಿಭಾಗದ ಫೈನಲ್​ನಲ್ಲಿ ವಿದ್ಯಾ ಸೌಧ ತಂಡ ಆಂಧ್ರದ ಸೈದಾಪುರದ ಎಸ್​ಬಿಎಂ ಸ್ಕೂಲ್​ ತಂಡವನ್ನು 15-8, 15-12ರಿಂದ ಮಣಿಸಿತು. ವಿದ್ಯಾಸೌಧದ ಯಶಸ್​ ಈ ವಿಭಾಗದಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು.

14 ವಯೋಮಿತಿ ಬಾಲಕಿಯರ ವಿಭಾಗದ ಫೈನಲ್​ನಲ್ಲೂ ವಿದ್ಯಾಸೌಧ ತಂಡ ಸೈದಾಪುರದ ಎಸ್​ಬಿಎಂ ಶಾಲಾ ತಂಡವನ್ನು 15-8, 15-12ರಿಂದ ಸೋಲಿಸಿತು. ವಿದ್ಯಾ ಸೌಧದ ದೀಕ್ಷಾ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು.

12 ವಯೋಮಿತಿ ಬಾಲಕರ ವಿಭಾಗದ ಫೈನಲ್​ನಲ್ಲಿ ವಿದ್ಯಾ ಸೌಧ ತಂಡ 15-8, 15-12ರಿಂದ ತೆಲಂಗಾಣದ ಎಸಿಎಸ್​ ಶಾಲಾ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತು. ವಿದ್ಯಾ ಸೌಧದ ಯಶಸ್​ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು.

12 ವಯೋಮಿತಿ ಬಾಲಕಿಯರ ವಿಭಾಗದ ಫೈನಲ್​ನಲ್ಲಿ ವಿದ್ಯಾ ಸೌಧ ತಂಡ ತೆಲಂಗಾಣದ ಎಸಿಎಸ್​ ಶಾಲಾ ತಂಡವನ್ನು 15-10, 15-12ರಿಂದ ಸೋಲಿಸಿತು. ವಿದ್ಯಾ ಸೌಧದ ಅದಿತಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು.

10 ವಯೋಮಿತಿ ಬಾಲಕರ ವಿಭಾಗದ ಪ್ರಶಸ್ತಿ ಕಾದಾಟದಲ್ಲಿ ವಿದ್ಯಾ ಸೌಧ ತಂಡ ಆತಿಥೇಯ ಅಮೃತಾಯ ಸೆಂಟ್ರಲ್​ ಸ್ಕೂಲ್​ ತಂಡವನ್ನು 15-6, 15-11ರಿಂದ ಪರಾಭವಗೊಳಿಸಿತು. ವಿದ್ಯಾ ಸೌಧದ ಲಿಖಿಲ್​ ಅತ್ಯುತ್ತಮ ಆಟಗಾರ ಪ್ರಶಸ್ತಿ ಗಳಿಸಿದರು.

10 ವಯೋಮಿತಿ ಬಾಲಕಿಯರ ವಿಭಾಗದ ಫೈನಲ್​ನಲ್ಲಿ ವಿದ್ಯಾ ಸೌಧ ತಂಡ 15-8, 15-7ರಿಂದ ಅಮೃತಾಯ ಸೆಂಟ್ರಲ್​ ಸ್ಕೂಲ್​ ತಂಡವನ್ನು ಮಣಿಸಿ ಪ್ರಶಸ್ತಿ ಒಲಿಸಿಕೊಂಡಿತು. ವಿದ್ಯಾ ಸೌಧದ ತೇಜಶ್ರೀ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಗಳಿಸಿದರು.
ವಿದ್ಯಾ ಸೌಧ ತಂಡ ಕ್ರೀಡಾಕೂಟದ ಟೇಕ್ವಾಂಡೊದಲ್ಲಿ 4 ಚಿನ್ನದ ಪದಕ, ಬ್ಯಾಡ್ಮಿಂಟನ್​ನಲ್ಲಿ 8 ಚಿನ್ನದ ಪದಕ, ಚೆಸ್​ನಲ್ಲಿ 6 ಚಿನ್ನದ ಪದಕ ಮತ್ತು ಯೋಗದಲ್ಲಿ 22 ಸ್ವರ್ಣ ಪದಕಗಳನ್ನು ಗೆದ್ದುಕೊಂಡಿತು. ಚೆಸ್​ನಲ್ಲಿ ವಿದ್ಯಾ ಸೌಧದ ಗಣಿಕಾ ಅತ್ಯುತ್ತಮ ಆಟಗಾರ ಪ್ರಶಸ್ತಿ ಗಳಿಸಿದರು.