ಕ್ರೀಡೆ

ರಾಷ್ಟ್ರೀಯ ಜಿಮ್ನಾಸ್ಟಿಕ್ಸ್: ರಾಜ್ಯದ ಓಷಿಯಾನಾ,ತನಿಷ್ಕಾ, ಅನ್ಯ ಮರಿಯಾ ಪದಕ ಸಾಧನೆ

ಬೆಂಗಳೂರು:ಸೂರತ್‌ನಲ್ಲಿ ನಡೆದ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಬೆಂಗಳೂರಿನ ಆರ್‌ಎನ್‌ಆರ್ ಫಿಟ್ ಅಕಾಡೆಮಿಯ ಓಷಿಯಾನಾ ರೆನೀ ಥಾಮಸ್ (ಬೆಳ್ಳಿ), ಅನ್ಯ ಮರಿಯಾ ಡಿಸೋಜಾ, ತನಿಷ್ಕಾ (ಕಂಚು) ಪದಕ ಸಾಧನೆ ಮಾಡಿದ್ದಾರೆ.

ಜೂನಿಯರ್ ವಿಭಾಗದಲ್ಲಿ ಒಟ್ಟಾರೆ 6ನೇ ಸ್ಥಾನ ಪಡೆದ 14 ವರ್ಷದ ಓಷಿಯಾನಾ ರೆನೀ ಥಾಮಸ್, ಬ್ಯಾಲೆನ್ಸ್ ಬೀಮ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಜೂನಿಯರ್ ಅನ್‌ವೆನ್ ಬಾರ್ಸ್‌ನಲ್ಲಿ ಅನ್ಯ ಮರಿಯಾ ಡಿಸೋಜಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಸಬ್ ಜೂನಿಯರ್ ವಿಭಾಗದ ಬ್ಯಾಲೆನ್ಸ್ ಬೀಮ್‌ನಲ್ಲಿ ತನಿಷ್ಕಾ (11 ವರ್ಷ) ಮತ್ತೊಂದು ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ.

ಸೀನಿಯರ್ ಕೋಚ್ ಮೇಘಾ ಅಂಬಿಲಿ, ಅರ್ಧೇಂದು ದಾಸ್ (ರಾಹುಲ್), ಹಿರಿಯ ತರಬೇತುದಾರ ಸಂಜೀವನಿ ಪೂರ್ಣಪಾತ್ರೆ ಮತ್ತು ಆರ್‌ಟಿಡಿ ಮುಖ್ಯ ಕೋಚ್ ಸಾಯಿ, ಕೋಚ್ ಮಿನಾರಾ ಬೇಗಂ ಬಳಿ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ.

ಸಂಸ್ಥಾಪಕರಾದ ವಿವಿಯೆನ್ನೆ ಮತ್ತು ಶ್ರೀ ಎಬೆನೆಜರ್ ಉತ್ಸಾಹವನ್ನು ಹಂಚಿಕೊಂಡಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದು ಸಣ್ಣ ಸಾಧನೆಯಲ್ಲ. ನಮ್ಮ ಜಿಮ್ನಾಸ್ಟ್‌ಗಳು ನಿಜವಾಗಿಯೂ ನಮಗೆ ಹೆಮ್ಮೆ ತಂದಿದ್ದಾರೆ. ಪ್ರತಿ ಪ್ರದರ್ಶನದಲ್ಲಿ ಅವರ ದಿಟ್ಟತನ, ಕಠಿಣ ಪರಿಶ್ರಮವು ಹೊಳೆಯುತ್ತದೆ. ಈ ಯಶಸ್ಸು ನಮ್ಮ ಜಿಮ್ನಾಸ್ಟ್‌ಗಳು, ತರಬೇತುದಾರರು ಮತ್ತು ಅವರ ಪೋಷಕರ ಅಚಲವಾದ ಬೆಂಬಲದ ನಡುವಿನ ಕೆಲಸದ ಪ್ರತಿಬಿಂಬವಾಗಿದೆ. ಪೋಷಕರಿಗೆ ಧನ್ಯವಾದಗಳು ತಿಳಿಸಿದರು.