ಕ್ರೀಡೆ

ಎಲ್ವಿಶ್ ಯಾದವ್ ಜತೆ ಎಂಜಾಯ್ ಮಾಡುತ್ತಿದ್ದಾರೆ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ Natasa ! ವಿಡಿಯೋ ನೋಡಿ...

ಮುಂಬೈ: ಹಾರ್ದಿಕ್ ಪಾಂಡ್ಯ ( Hardik Pandya ) ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ( Natasa Stankovic )​ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಘೋಷಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್, ಪ್ರಸಿದ್ಧ ಯೂಟ್ಯೂಬರ್ ಮತ್ತು ಬಿಗ್ ಬಾಸ್ OTT 2 ವಿಜೇತ ಎಲ್ವಿಶ್ ಯಾದವ್ ಅವರ ಜತೆ ಸುತ್ತಾಡುತ್ತಿದ್ದಾರೆ. ಈ ಕುರಿತಾದ ಕೆಲವು ವಿಡಿಯೋಗಳು Instagram ನಲ್ಲಿ ವೈರಲ್ ಆಗುತ್ತಿದೆ.

ಎರಡು ತಿಂಗಳ ಹಿಂದೆ ಹಾರ್ದಿಕ್ ಮತ್ತು ನತಾಶಾ ತಮ್ಮ ನಾಲ್ಕು ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದರು. ಕೆಲ ತಿಂಗಳಿಂದ ಇಬ್ಬರ ನಡುವೆ ಮನಸ್ತಾಪ ಇತ್ತು. ಇದಾದ ನಂತರ ಜುಲೈ 18ರಂದು ಇಬ್ಬರೂ ವಿಚ್ಛೇದನದ ವದಂತಿಯನ್ನು ಪೋಸ್ಟ್ ಮೂಲಕ ನಿಜವೆಂದು ಸಾಬೀತುಪಡಿಸಿದರು. ಆದಾಗ್ಯೂ, ಇದಾದ ನಂತರ, ನತಾಶಾ ಸೆರ್ಬಿಯಾದಿಂದ ಮುಂಬೈಗೆ ಹಿಂದಿರುಗಿದ ನಂತರ ಹಾರ್ದಿಕ್ ಇತ್ತೀಚೆಗೆ ಮಗ ಅಗತ್ಸ್ಯಾ ಅವರನ್ನು ಭೇಟಿಯಾಗಿ ಮೋಜು ಮಾಡುತ್ತಿದ್ದಾರೆ.  ಪತಿಯಿಂದ ಬೇರೆಯಾದ ಬೆನ್ನಲ್ಲೇ ನತಾಶಾ ಎಲ್ವಿಶ್ ಯಾದವ್ ಜತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.

ಹಾರ್ದಿಕ್​ ಪಾಂಡ್ಯ ಕೂಡ ಕ್ರಿಕೆಟ್​ನಲ್ಲಿ ಬಿಜಿಯಾದರು. ಇದರ ನಡುವೆ ಹಾರ್ದಿಕ್​ ಪಾಂಡ್ಯ ಅವರು ಬ್ರಿಟಿಷ್​ ಗಾಯಕಿ ಮತ್ತು ನಟಿ ಜಾಸ್ಮಿನ್​ ವಾಲಿಯಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಹರದಾಡಿತು ಮತ್ತು ಆ ಸುದ್ದಿ ತಣ್ಣಗಾಯಿತು.

ಸರ್ಬಿಯಾ ದೇಶದಿಂದ ಹಿಂದಿರುಗಿದ ನಂತರ ಫಿಟ್​ನೆಶ್​ ಕೋಚ್​, ನಟ ಹಾಗೂ ಮಾಡೆಲ್​ ಅಲೆಕ್ಸಾಂಡರ್​ ಅಲೆಕ್ಸ್ ಜೊತೆ ನತಾಶಾ ಸಮಯ ಕಳೆಯುತ್ತಿದ್ದಾರೆ. ಕೆಲವೊಮ್ಮೆ ಜಿಮ್‌ನಲ್ಲಿ ಮತ್ತು ಕೆಲವೊಮ್ಮೆ ಈಜುಕೊಳದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿತ್ತು.

ಆದರೆ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ ನತಾಶಾ ಸ್ಟಾಂಕೋವಿಕ್   ಅವರು  ಯೂಟ್ಯೂಬರ್ ಮತ್ತು ಬಿಗ್ ಬಾಸ್ OTT 2 ವಿಜೇತ ಎಲ್ವಿಶ್ ಯಾದವ್ ಜತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕೆ ಇಬ್ಬರು ಭೇಟಿಯಾಗಿದ್ದರು.. ಎನ್ನುವ ಯಾವುದೇ ಮಾಹಿತಿ ಇಲ್ಲ.. ಆದರೆ ಇಬ್ಬರು ಜತೆಯಾಗಿ ಕಾಣಿಸಿಕೊಂಡಿರುವ ವಿಡಿಯೋಗಳು ಮಾತ್ರ ವೈರಲ್​​ ಆಗುತ್ತಿವೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳ ಮೂಲಕ ಹಾರ್ದಿಕ್​ ಪಾಂಡ್ಯ ಕಾಲೆಳೆಯುತ್ತಿದ್ದಾರೆ.