ಅಬುಧಾಬಿ: ಕ್ರಿಕೆಟ್ ಶಿಶು ನಮೀಬಿಯ ತಂಡ ಟಿ20 ವಿಶ್ವಕಪ್‌ನ ಸೂಪರ್-12ರಲ್ಲಿ ಸ್ಕಾಟ್ಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸ್ಕಾಟ್ಲೆಂಡ್, ರುಬೆನ್ ಟ್ರಂಪೆಲ್‌ಮನ್ (17ಕ್ಕೆ 3) ಎಸೆದ ಮೊದಲ 4 ಎಸೆತಗಳಲ್ಲೇ 3 ವಿಕೆಟ್ ಕಳೆದು ಕೊಂಡಿತು. ಬಳಿಕ ಮೈಕೆಲ್ ಲೀಸ್ಕ್ (44) ಮತ್ತು ಕ್ರಿಸ್ ಗ್ರೀವ್ಸ್ (25) ಪ್ರತಿಹೋರಾಟದಿಂದ
ಸ್ಕಾಟ್ಲೆಂಡ್ 8 ವಿಕೆಟ್‌ಗೆ 109 ರನ್ ಗಳಿಸಿತು. ಬಳಿಕ ನಮೀಬಿಯ ತಂಡ ಜಾನ್ಸ್ ಸ್ಮಿತ್ (32*ರನ್, 23 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 115 ರನ್ ಗಳಿಸಿ ಜಯ ದಾಖಲಿಸಿತು. ಮತ್ತೊಂದೆಡೆ ಸತತ 2ನೇ ಸೋಲನುಭವಿಸಿದ ಸ್ಕಾಟ್ಲೆಂಡ್ ತಂಡದ ಮುಂದಿನ ಹಾದಿ ಕಠಿಣಗೊಂಡಿತು.
ಸ್ಕಾಟ್ಲೆಂಡ್: 8 ವಿಕೆಟ್‌ಗೆ 109 (ಮ್ಯಾಥ್ಯೂ ಕ್ರಾಸ್ 19, ಮೈಕಲ್ ಲೀಸ್ಕ್ 44, ಕ್ರೀಸ್ ಗ್ರೇವ್ಸ್ 25, ರುಬೆಲ್ ಟ್ರಂಪೆಲ್‌ಮ್ಯಾನ್ 17ಕ್ಕೆ 3, ಜಾನ್ ೈಲಿಂಕ್ 10ಕ್ಕೆ 2), ನಮೀಬಿಯ: 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 115 (ಕ್ರೇಗ್ ವಿಲಿಯಮ್ಸ್ 23, ಮೈಕಲ್ ವ್ಯಾನ್ ಲಿಂಗೆನ್ 18, ಡೇವಿಡ್ ವೈಸ್ 16, ಜಾನ್ಸ್ ಸ್ಮಿತ್ 32*, ಮೈಕಲ್ ಲೀಸ್ಕ್ 12ಕ್ಕೆ 2)