ಬೆಂಗಳೂರು: ಮನೀಷ್ ಪಾಂಡೆ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್ ತಂಡದ ಸತತ 5 ಗೆಲುವಿನ ಓಟಕ್ಕೆ ಮೈಸೂರು ವಾರಿಯರ್ಸ್ ತಂಡ ಬ್ರೇಕ್ ಹಾಕಿದೆ. ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯಲ್ಲಿ ನಡೆದ ಭಾನುವಾರದ ಮೊದಲ ಪಂದ್ಯದಲ್ಲಿ ಲವನೀತ್ ಸಿಸೋಡಿಯಾ (105 ರನ್, 62 ಎಸೆತ, 7 ಬೌಂಡರಿ, 7 ಸಿಕ್ಸರ್) ಶತಕದಬ್ಬರದ ನಡುವೆಯೂ ಹುಬ್ಬಳ್ಳಿ ಟೈಗರ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧ 6 ವಿಕೆಟ್ಗಳಿಂದ ಶರಣಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಹುಬ್ಬಳ್ಳಿ ತಂಡ 7 ವಿಕೆಟ್ಗೆ 185 ರನ್ ಪೇರಿಸಿತು. ಪ್ರತಿಯಾಗಿ ಮೈಸೂರು ತಂಡ ಆರ್. ಸಮರ್ಥ್ (73 ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಬಿರುಸಿನಾಟದಿಂದ 18.5 ಓವರ್ಗಳಲ್ಲಿ 4 ವಿಕೆಟ್ಗೆ 188 ರನ್ ಗಳಿಸಿ ಸತತ 4ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿತು.
ಹುಬ್ಬಳ್ಳಿ ಟೈಗರ್ಸ್: 7 ವಿಕೆಟ್ಗೆ 185 (ಸಿಸೋಡಿಯಾ 105, ತಾಹ 6, ಮನೀಷ್ ಪಾಂಡೆ 33, ಪ್ರವಿಣ್ ದುಬೆ 16, ಸಿಎ ಕಾರ್ತಿಕ್ 50ಕ್ಕೆ 4), ಮೈಸೂರು ವಾರಿಯರ್ಸ್: 18.5 ಓವರ್ಗಳಲ್ಲಿ 4 ವಿಕೆಟ್ಗೆ 188 (ಸಮಥ್ 73, ಸಿಎ ಕಾರ್ತಿಕ್ 29, ಕರುಣ್ 41, ರತ್ 22*, ಪ್ರವಿಣ್ ದುಬೆ 38ಕ್ಕೆ 3). ಪಂದ್ಯಶ್ರೇಷ್ಠ: ಆರ್. ಸಮರ್ಥ್.