ಕೆಪಿಪಿಎಲ್​ ಪ್ರಶಸ್ತಿ ವಿಜೇತ ಮೈಸೂರು ರಾಯಲ್ಸ್ ತಂಡ ಏಜೆನ್ಸಿ
ಕ್ರೀಡೆ

ಮೈಸೂರು ರಾಯಲ್ಸ್ ತಂಡಕ್ಕೆ ಕೆಪಿಪಿಎಲ್ ಟ್ರೋಫಿ ಗರಿ

ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ತುಮಕೂರು ಟೈಟಾನ್ಸ್ ತಂಡವನ್ನು ಮಣಿಸಿ 'ಮೈಸೂರು ರಾಯಲ್ಸ್' ತಂಡ ಚಾಂಪಿಯನ್ ಪಟ್ಟಕ್ಕೇರಿದೆ.

ಬೆಂಗಳೂರು: ಕರ್ನಾಟಕ ಪಿಕ್ಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ಮೊದಲ ಆವೃತ್ತಿಯು ರೋಚಕ ಅಂತ್ಯ ಕಂಡಿದ್ದು, ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ತುಮಕೂರು ಟೈಟಾನ್ಸ್ ತಂಡವನ್ನು ಮಣಿಸಿ 'ಮೈಸೂರು ರಾಯಲ್ಸ್' ತಂಡವು ಚಾಂಪಿಯನ್ ಪಟ್ಟಕ್ಕೇರಿದೆ.

ಬೆಂಗಳೂರಿನ ಜಿಕೆವಿಕೆ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆದ ಈ ರೋಮಾಂಚಕ ಟೂರ್ನಿಯಲ್ಲಿ ರಾಜ್ಯದ ವಿವಿಧ ನಗರಗಳ ಪ್ರಮುಖ ಫ್ರ್ಯಾಂಚೈಸಿಗಳು ಪಾಲ್ಗೊಂಡಿದ್ದವು. 45 ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ದೇಶದ 50ಕ್ಕೂ ಹೆಚ್ಚು ಶ್ರೇಷ್ಠ ಆಟಗಾರರು ತಮ್ಮ ಚುರುಕಿನ ಆಟದ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಕೇವಲ ಒಂದು ಎಸೆತ ಬಾಕಿ ಇರುವಂತೆ ನಡೆದ ಫೈನಲ್ ಪಂದ್ಯವು ಪ್ರೇಕ್ಷಕರಲ್ಲಿ ಭಾರೀ ರೋಮಾಂಚನ ಮೂಡಿಸಿತು.

ಸಮಾರೋಪ ಸಮಾರಂಭದಲ್ಲಿ ನಟ ಶ್ರೀಮುರಳಿ ಅವರು ವಿಜೇತರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಅತ್ಯುತ್ತಮ ಪುರುಷ ಆಟಗಾರರಾಗಿ ಅರ್ಥವ್ ನೀಮಾ, ಮಹಿಳಾ ಆಟಗಾರ್ತಿಯಾಗಿ ಆಲ್ಯಕಾ ಎಬ್ರಾಹಿಂ ಹಾಗೂ ಮೈಸೂರು ರಾಯಲ್ಸ್ ತಂಡದ ವಂಶಿಕ್ ಕಪಾಡಿಯಾ 'ಮ್ಯಾನ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದರು. ಕರ್ನಾಟಕ ರಾಜ್ಯ ಪಿಕ್ಕಲ್‌ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಈ ಲೀಗ್ ರಾಜ್ಯದಲ್ಲಿ ಹೊಸ ಕ್ರೀಡಾ ಸಂಸ್ಕೃತಿಗೆ ನಾಂದಿ ಹಾಡಿದೆ.