ನವದೆಹಲಿ:ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುಂಡಿರುವ ಹಾಲಿ ಚಾಂಪಿಯನ್ ಸಿಎಸ್ಕೆಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ವೇಗಿ ಮುಸ್ತಾಫಿಜುರ್ ರೆಹಮಾನ್ ಸಿಎಸ್ಕೆ ಪರ ಮುಂದಿನ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯವಹಿಸಲಿರುವ ಮುಂಬರುವ ಟಿ20 ವಿಶ್ವಕಪ್ಗಾಗಿ ವೀಸಾ ಪ್ರಕ್ರಿಯೆ ಪೂರ್ಣಗೊಳಿಸಲು ಮುಸ್ತಾಫಿಜುರ್ ತವರು ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಪ್ರಸ್ತುತ ಸಿಎಸ್ಕೆ ತಂಡ ಹೈದರಾಬಾದ್ನಲ್ಲಿದ್ದು, ಶುಕ್ರವಾರ ಆತಿಥೇಯ ಸನರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. 28 ವರ್ಷದ ಮುಸ್ತಾಫಿಜುರ್ ಹಾಲಿ ಟೂರ್ನಿಯಲ್ಲಿ ಗರಿಷ್ಠ 7 ವಿಕೆಟ್ ಪಡೆದಿರುವ ಬೌಲರ್ ಎನಿಸಿದ್ದಾರೆ. 202ರ ಐಪಿಎಲ್ ಹರಾಜಿನಲ್ಲಿ ಸೇಲಾದ ಬಾಂಗ್ಲಾದೇಶದ ಏಕೈಕ ಆಟಗಾರ ಆಗಿದ್ದಾರೆ.ಮುಸ್ತಾಫಿಜುರ್ ಬದಲಿಗೆ ಸಿಎಸ್ಕೆ ಪರ ಮುಂದಿನ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ಮಹೀಶ್ ತೀಣ ಅಥವಾ ಆಲ್ರೌಂಡರ್ ಮೊಯಿನ್ ಅಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಹೊರಬಿದ್ದ ಮಾವಿ: ಆರ್ಸಿಬಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಏರಿಕೆ ಕಂಡಿರುವ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಆಘಾತ ಎದುರಾಗಿದ್ದು, ಗಾಯಾಳು ಶಿವಂ ಮಾವಿ ಐಪಿಎಲ್&17ರ ಆವೃತ್ತಿಯಿಂಲೆ ಹೊರಬಿದ್ದಿದ್ದಾರೆ. ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡುವ ಮೂಲಕ ್ರಾಂಚೈಸಿ ಮಾಹಿತಿ ನೀಡಿದೆ. 2023ರ ಆಗಸ್ಟ್ನಲ್ಲಿ ಕೊನೆಯದಾಗಿ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದ ಮಾವಿ, ಕಳೆದ ವರ್ಷ ನಡೆದ ಐಪಿಎಲ್ನಲ್ಲಿ ಹರಾಜಿನಲ್ಲಿ < 6.4 ಕೋಟಿಗೆ ಲಖನೌ ತಂಡ ಸೇರಿದ್ದರು