ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 13ನೇ ಆವೃತ್ತಿಗೆ ಹೊಸ ಜೆರ್ಸಿಯೊಂದಿಗೆ ಸಜ್ಜಾಗಿದೆ. ಈ ಹಿಂದಿನ ಐಪಿಎಲ್ಗಳಿಗಿಂತ ಸ್ವಲ್ಪ ಭಿನ್ನವಾದ ಜೆರ್ಸಿಯೊಂದಿಗೆ 4 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕಣಕ್ಕಿಳಿಯಲಿದೆ.
ರೋಹಿತ್ ಶರ್ಮ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಭಾನುವಾರ ಅಬುಧಾಬಿಯಲ್ಲಿ ಅಭ್ಯಾಸ ಆರಂಭಿಸಿದೆ. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.
ಹೊಸ ಜೆರ್ಸಿಯಲ್ಲಿ ಎದುರು ಭಾಗದಲ್ಲಿ ತಿಳಿ ನೀಲಿ ಬಣ್ಣವಿದ್ದರೆ, ಭುಜದ ಭಾಗದಲ್ಲಿ ಚಿನ್ನದ ಸ್ಟ್ರಿಪ್ಸ್ಗಳಿವೆ. ಭುಜ ಮತ್ತು ಪಕ್ಕದ ಭಾಗದ ಬಣ್ಣ ಕಡುನೀಲಿಯಾಗಿದೆ. ಟ್ರೌಸರ್ಸ್ ಕಡು ನೀಲಿ ಬಣ್ಣದ್ದಾಗಿದೆ. ತಂಡದ ಅಧಿಕೃತ ಪ್ರಾಯೋಜಕ ಸ್ಯಾಮ್ಸಂಗ್ ಹೆಸರನ್ನು ಜೆರ್ಸಿಯ ಎದುರು ಭಾಗದಲ್ಲಿ ಬರೆಯಲಾಗಿದೆ. ಬೆನ್ನಹಿಂದೆ ಕಲರ್ ಚಾನಲ್ನ ಹೆಸರು ಇದೆ.