ಕ್ರೀಡೆ

VIDEO: ಬೀಚ್‌ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರ ಮೋಜು, ಮಸ್ತಿ..!

ಅಬುಧಾಬಿ: 13ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಎಲ್ಲ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸೆ.19 ರಂದು ಉದ್ಘಾಟನಾ ಪಂದ್ಯಕ್ಕೂ ವೇದಿಕೆ ಸಜ್ಜಾಗಿದೆ. ಕಠಿಣ ಅಭ್ಯಾಸದ ನಡುವೆಯೂ ಆಟಗಾರರ ಮೋಜು ಮಸ್ತಿ ಮಾತ್ರ ಕಡಿಮೆಯಾಗಿಲ್ಲ. ಮುಂಬೈ ಇಂಡಿಯನ್ಸ್ ಆಟಗಾರರು ಅಬಿಧಾಬಿಯಲ್ಲಿರುವ ಬೀಚ್‌ನಲ್ಲಿ ಮೋಜು- ಮಸ್ತಿ ಮಾಡಿರುವ ಫೋಟೋಗಳು ವೈರಲ್ ಆಗಿವೆ. ಮುಂಬೈ ಇಂಡಿಯನ್ಸ್‌ನ ಕೆಲ ಆಟಗಾರರು ಪತ್ನಿ, ಮಕ್ಕಳ ಸಮೇತ ತೆರಳಿದ್ದು, ಅವರೊಂದಿಗೆ ಬೀಚ್‌ನಲ್ಲಿ ಆಟವಾಡುವ ಮೂಲಕ ಸಮಯ ಕಳೆದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ, ಆದಿತ್ಯ ತಾರೆ, ಧವಳ್ ಕುಲಕರ್ಣಿ, ಸೂರ್ಯಕುಮಾರ್ ಯಾದವ್, ಸೇರಿದಂತೆ ಕೆಲ ಆಟಗಾರರು ಪತ್ನಿ ಹಾಗೂ ಮಕ್ಕಳೊಂದಿಗೆ ಬೀಚ್‌ನಲ್ಲಿ ಆಟವಾಡಿದ್ದಾರೆ. ಹೀಗೆ ಬೀಚ್‌ನಲ್ಲಿ ಆಟವಾಡುವ ಮೂಲಕ ಜಂಜಾಟದಿಂದ ಬರುವ ಪ್ರಯತ್ನ ಮಾಡಿದರು. ಐಪಿಎಲ್‌ನ 8 ತಂಡಗಳ ಪೈಕಿ 6 ತಂಡಗಳು ದುಬೈನಲ್ಲಿ ಉಳಿದುಕೊಂಡಿದ್ದರೆ, ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ತಂಡಗಳು ಅಬಿಧಾಬಿಯಲ್ಲಿ ಉಳಿದುಕೊಂಡಿವೆ. 6 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಅಭ್ಯಾಸದಲ್ಲಿ ನಿರತವಾಗಿವೆ. ಕೋವಿಡ್-19 ಮಹಾಮಾರಿಯಿಂದಾಗಿ ಕಳೆದ 6 ತಿಂಗಳಿಂದ ಕ್ರಿಕೆಟಿಗರು ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಮಾರ್ಚ್ 29 ರಿಂದ ಆರಂಭಗೊಳ್ಳಬೇಕಿದ್ದ ಐಪಿಎಲ್ ಕರೊನಾ ವೈರಸ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿತು. ಸೆ.19 ರಿಂದ ನ.10ರವರೆಗೆ ಟೂರ್ನಿ ನಡೆಯಲಿದ್ದು, 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.