ಮುಂಬೈ: ಈ ವರ್ಷದ ಐಪಿಎಲ್ (IPL 2026) ಹರಾಜಿಗೆ ವೇದಿಕೆ ಸಿದ್ಧವಾಗುತ್ತಿದ್ದು, ತಮ್ಮ ತಂಡದ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಕೈ ಬಿಡಲು ನವೆಂಬರ್ 15 ಕೊನೆ ದಿನವಾಗಿದೆ. ಹರಾಜಿಗೆ ಮುಂಚಿತವಾಗಿ ಎಲ್ಲಾ 10 ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ.
ಇತ್ತೀಚೆಗೆ ಐಪಿಎಲ್ ಟ್ರೇಡ್ ಮಾತುಕತೆಗಳು ಭಾರೀ ಸದ್ದು ಮಾಡಿದ್ದು, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ ವಿನಿಮಯವು ಸುದ್ದಿಗಳು ಜೊರಾಗಿವೆ. ಈ ನಡುವೆ ಉಳಿದ ತಂಡಗಳು ಕೂಡ ಸಮತೋಲನ ತರುವ ನಿಟ್ಟಿನಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಿವೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ ! ವೈರಲ್ ಆಯ್ತು ‘ಕಿಸ್’ ವಿಡಿಯೋ.. Rashmika Mandanna
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಅರ್ಜುನ್ ತೆಂಡೂಲ್ಕರ್ ಬದಲಿಗೆ ಶಾರ್ದೂಲ್ ಠಾಕೂರ್ರನ್ನು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ ಎನ್ನುವ ಪಿಸು ಮಾತುಗಳು ಕೇಳಿ ಬರುತ್ತಿದ್ದು, ಎಂಐ ತಂಡದ ಬ್ಯಾಟಿಂಗ್ ಮತ್ತು ವೇಗದ ಬೌಲಿಂಗ್ ವಿಭಾಗ ಉತ್ತಮವಾಗಿದ್ದು, ತಜ್ಞ ಸ್ಪಿನ್ನರ್ ಕೊರತೆ ಪ್ರಶಸ್ತಿಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಕಳೆದ ವರ್ಷ ಹಿರಿಯ ಸ್ಪಿನ್ನರ್ ಕರ್ಣ ಶರ್ಮಾ ಏಕಾಂಗಿಯಾಗಿ ತಂಡಕ್ಕೆ ನೆರವಾಗಿದ್ದರು.
ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಎಂಐ ಆಡಳಿತ ಮಂಡಳಿ ತಮ್ಮ ಹಳೆಯ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರತ್ತ ಒಲವು ತೋರಿದೆ ಎಂದು ಮೂಲಗಳು ತಿಳಿಸಿದ್ದು, ಕಳೆದ ಋತುವಿನಲ್ಲಿ ಕೆಕೆಆರ್ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದ ಮಾರ್ಕಂಡೆಯನ್ನು MI ಪೂರ್ಣ ನಗದು ಒಪ್ಪಂದದ ಮೂಲಕ ಪಡೆಯಲು ಸಿದ್ಧವಾಗಿರುವ ಮಾಹಿತಿಗಳು ಲಭ್ಯವಾಗಿದೆ. ಒಂದು ವೇಳೆ ಇದು ನಿಜವೇ ಆದರೆ ಮಾಯಾಂಕ್ ತಮ್ಮ ಮೂಲ ತಂಡಕ್ಕೆ ಮರಳಲಿದ್ದಾರೆ. 2018 ರಲ್ಲಿ ಮುಂಬೈ ಪರ ಆಡಿದ್ದ ಮಾರ್ಕಂಡೆ ಅದ್ಭುತ ಪ್ರದರ್ಶನ ನೀಡಿ, ಆ ಋತುವಿನಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದರು.
ಮುಂಬೈ ಇಂಡಿಯನ್ಸ್ ಮತ್ತೊಬ್ಬ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಮೇಲೆ ಕೂಡ ಕಣ್ಣಿಟ್ಟಿದ್ದು. ರಾಹುಲ್ 2025 ರ ಐಪಿಎಲ್ನಲ್ಲಿ ಹೈದ್ರಾಬಾದ್ ತಂಡದ ಪರವಾಗಿ ಕೇವಲ ಒಂದು ಪಂದ್ಯ ಆಡಿದ್ದರು. 2020 ರ ಐಪಿಎಲ್ ಚಾಂಪಿಯನ್ ಎಂಐ ತಂಡದ ಪ್ರಮುಖ ಸದಸ್ಯರಾಗಿದ್ದರು. ಈಗಾಗಲೇ ಮುಂಬೈ ತಂಡದಲ್ಲಿ ವಿಘ್ನೇಶ್ ಪುತ್ತೂರ್ ಮತ್ತು ಕರ್ಣ್ ಶರ್ಮಾ ಭಾರತೀಯ ಸ್ಪಿನ್ ಆಯ್ಕೆಗಳಿದ್ದು, ಮಿಚೆಲ್ ಸ್ಯಾಂಟ್ನರ್ ಮತ್ತು ವಿಲ್ ಜ್ಯಾಕ್ಸ್ ವಿದೇಶಿ ಸ್ಪಿನ್ನರ್ಗಳಾಗಿದ್ದಾರೆ.(ಏಜೆನ್ಸೀಸ್)