ಕ್ರೀಡೆ

Santa Claus ವೇಷ ತೊಟ್ಟು ಮಿಂಚಿದ ಮಾಜಿ ಕ್ರಿಕೆಟಿಗ; ಫ್ಯಾನ್ಸ್​ ಮನಗೆಲ್ಲುತ್ತಿವೆ ವೈರಲ್​ ಫೋಟೋಗಳು

ನವದೆಹಲಿ: ಟೀಮ್​ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ನಾಯಕರಲ್ಲಿ ಒಬ್ಬರಾಗಿರುವ ಕ್ಯಾಪ್ಟನ್ ಕೂಲ್​ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗಿದ್ದರು ಈಗಲೂ ಅವರಿಗೆ ಸಂಬಂಧಿಸಿದ ಸುದ್ದಿಗಳು ಸಖತ್ ಸೌಂಡ್​ ಮಾಡುತ್ತಿರುತ್ತವೆ. ಅದು ಎಷ್ಟರ ಮಟ್ಟಿಗೆ ಎಂದರೆ ಮೈದಾನದ ಹೊರಗೆ ಅಥವಾ ಒಳಗೆ ಇದ್ದರೂ ಕೂಡ ಧೋನಿ ಹೆಸರು ಈಗಲೂ ಚಾಲ್ತಿಯಲ್ಲಿದ್ದು, ಇದೀಗ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಧೋನಿ ಅವರನ್ನು ಕಂಡು ಫುಲ್​ ಖುಷ್​ ಆಗಿದ್ದಾರೆ.

ಕ್ರಿಸ್​ಮಸ್​ ಹಬ್ಬವನ್ನು ಧೋನಿ ತಮ್ಮ ಕುಟುಂಬ ಹಾಗೂ ಮಿತ್ರರೊಂದಿಗೆ ಆಚರಿಸಿದ್ದು, ಈ ವೇಳೆ ಧೋನಿ ಸಾಂತಾ ಕ್ಲಾಸ್ (Santa Claus) ಡ್ರೆಸ್​ ಧರಿಸಿ ಅಲ್ಲಿದ್ದವರನ್ನು ಮನರಂಜಿಸಿದ್ದಾರೆ. ಈ ಫೋಟೋಗಳನ್ನು ಅವರ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪುತ್ರಿ ಝೀವಾ ಹಾಗೂ ಸ್ನೇಹಿತರು ಜತೆಗಿರುವುದನ್ನು ನೋಡಬಹುದಾಗಿದೆ. ಸದ್ಯ ಈ ಪೋಸ್ಟ್​ ವೈರಲ್​ ಆಗಿದ್ದು, ಅಭಿಮಾನಿಗಳು ಶುಭಾಶಯ ಕೋರಿ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ.

ಸದ್ಯ ವೆಕೇಷನ್​ ಮೂಡ್​ನಲ್ಲಿರುವ ಧೋನಿ ಅವರು 18ನೇ ಆವೃತ್ತಿಯ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಆಡಲಿದ್ದಾರೆ. ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿ ಅವರನ್ನು ರಿಟೇನ್​ ಮಾಡಲಾಗಿದ್ದು, ಕಳೆದ ಆವೃತ್ತಿಯಲ್ಲಿ ನಾಯಕತ್ವವನ್ನು ಋತುರಾಜ್​ಗೆ ಹಸ್ತಾಂತರಿಸಿದ್ದರು. ಅಭಿಮಾನಿಗಳು ಅವರ ಆಟವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಸ್ಟಾರ್ಸ್ ಪರ ಆಡಿರುವ ಧೋನಿ ಅವರು ಐಪಿಎಲ್ ನಲ್ಲಿ 264 ಪಂದ್ಯಗಳಿಂದ 39.12 ಸರಾಸರಿಯಲ್ಲಿ 5243 ರನ್ ಗಳನ್ನು ಕಲೆ ಹಾಕಿದ್ದಾರೆ. ವಿಕೆಟ್​ಕೀಪರ್​ ಆಗಿ 152 ಕ್ಯಾಚ್ ಮತ್ತು 42 ಸ್ಟಂಪಿಂಗ್ ಮಾಡಿದ್ದಾರೆ.