ಮುಂಬೈ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ಗೆ (IPL) ತಿಂಗಳುಗಳು ಬಾಕಿ ಉಳಿದಿದ್ದು, ಐಪಿಎಲ್ ಮ್ಯಾನೇಜ್ಮಂಟ್ ಫ್ರಾಂಚೈಸಿಗಳ ಬೇಡಿಕೆಗೆ ಸಮ್ಮತ್ತಿಸಿದ್ದು, ತಂಡದ;ಲ್ಲಿ ಒಟ್ಟು ಆರು ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಐಪಿಎಲ್ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಫ್ರಾಂಚೈಸಿಗಳು ಮುಂದಿನ ಸಿದ್ಧತೆಯನ್ನು ಆರಂಭಿಸಿವೆ.
ಒಂದು ತಂಡವು ಐವರು ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ, ಮೊದಲ ಮೂವರು ಆಟಗಾರರಿಗೆ 18, 14, 11 ಕೋಟಿ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಮತ್ತೆರಡು ಆಟಗಾರರಿಗೆ 18 ಮತ್ತು 14 ಕೋಟಿ ರೂಪಾಯಿ ಸಂಭಾವನೆಯನ್ನು ಫ್ರಾಂಚೈಸಿ ಕೊಡಬೇಕಾಗುತ್ತದೆ. ಇದೀಗ ಸಂಭಾವನೆಯ ವಿಚಾರವಾಗಿ ಸಿಎಸ್ಕೆ ತಂಡದ ಮಾಜಿ ನಾಯಕ ಧೋನಿ (Dhoni) ಸದ್ದು ಮಾಡುತ್ತಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.
ಇದೀಗ ಧೋನಿ ಅವರನ್ನು ಸಿಎಸ್ಕೆ ಫ್ರಾಂಚೈಸಿಯು ಅನ್ಕ್ಯಾಪ್ಡ್ ಆಟಗಾರನ ಅಡಿಯಲ್ಲಿ ರಿಟೇನ್ ಮಾಡಿಕೊಳ್ಳುತ್ತಿದ್ದು, ಅವರಿಗೆ 4 ಕೋಟಿ ರೂ. ಸಂಭಾವನೆ ಕೊಡಬಹುದು ಎಂದು ಹೇಳಲಾಗಿದೆ. 2022ರಲ್ಲಿ ನಡೆದ ಮೆಗಾ ಆಕ್ಷನ್ನಲ್ಲಿ ಧೋನಿ ಅವರನ್ನು ಸಿಎಸ್ಕೆ ಫ್ರಾಂಚೈಸಿಯು 12 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿತ್ತು. ಇದೀಗ ಅನ್ಕ್ಯಾಪ್ಡ್ ಪ್ಲೇಯರ್ ಕೋಟಾದಲ್ಲಿ ಸಿಎಸ್ಕೆ ಧೋನಿ ಅವರನ್ನು ರಿಟೇನ್ ಮಾಡಿಕೊಳ್ಳಲು ಮುಂದಾಗಿದೆ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಧೋನಿ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ.
ಐಪಿಎಲ್ನ ಮೆಗಾ ಹರಾಜು ಈ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಗಳು ಈ ಬಾರಿಯ ಮೆಗಾ ಆಕ್ಷನ್ಗೂ ಮುನ್ನ ಒಟ್ಟು ಐವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಓರ್ವ ಆಟಗಾರನ ಮೇಲೆ ಆರ್ಟಿಎಂ ಕಾರ್ಡ್ ಬಳಸಿಕೊಳ್ಳಬಹುದಾಗಿದೆ. ಹೀಗೆ ರಿಟೇನ್ ಮಾಡಿಕೊಳ್ಳುವ ಐವರು ಆಟಗಾರರಲ್ಲಿ ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೂ ಅವಕಾಶ ನೀಡಬಹುದು. ಆದರೆ ಈ ಬಾರಿ ಅನ್ಕ್ಯಾಪ್ಡ್ ಆಟಗಾರರ ನಿಯಮದಲ್ಲೂ ಬಿಸಿಸಿಐ ಬದಲಾವಣೆ ತಂದಿದೆ. ಅದು ಸಹ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಕೋರಿಕೆಯ ಮೇರೆಗೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದಾಗಿತ್ತು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಈ ನಿಯಮವನ್ನು ಮತ್ತೆ ಜಾರಿಗೊಳಿಸುವಂತೆ ಸಿಎಸ್ಕೆ ಫ್ರಾಂಚೈಸಿ ಧೋನಿ ಸಲುವಾಗಿ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗುತ್ತ ಬಂದಿದ್ದು, ಹೀಗಾಗಿ ಅವರನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಎಂದು ಪರಿಗಣಿಸಲಾಗುತ್ತದೆ.
ಈ ಮೂಲಕ ಧೋನಿಯನ್ನು ಕಡಿಮೆ ಮೊತ್ತ ನೀಡಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಲು ಸಿಎಸ್ಕೆ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ. ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಸಿಎಸ್ಕೆ ಕಳೆದ ಸೀಸನ್ ಹರಾಜಿಗೂ ಮುನ್ನ 12 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಆದರೆ ಈ ಬಾರಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡರೆ ಕೇವಲ 4 ಕೋಟಿ ರೂ. ಮಾತ್ರ ಕೊಡಬೇಕಾಗುತ್ತದೆ.