ಬೇಸ್​ಬಾಲ್​ ಚಾಲೆಂಜ್​ನ ನೋಟ. ಏಜೆನ್ಸಿ
ಕ್ರೀಡೆ

ಬೇಸ್​ಬಾಲ್​ ಚಾಲೆಂಜ್​ನಲ್ಲಿ 95 ಲಕ್ಷ ರೂ. ಗೆದ್ದ ಹಾರ್ದಿಕ್​ ಪಾಂಡ್ಯ!

ಫುಟ್​ಬಾಲ್​ ತಾರೆ ಎರ್ಲಿಂಗ್​ ಹಾಲೆಂಡ್​ ಮತ್ತು ಬಾಸ್ಕೆಟ್​ಬಾಲ್​ ದಿಗ್ಗಜ ಲೆಬ್ರೋನ್​ ಜೇಮ್ಸ್​ ಕೂಡ ಈ ಚಾಲೆಂಜ್​ನಲ್ಲಿ ಪಾಲ್ಗೊಂಡಿದ್ದರು.

ಮುಂಬೈ: ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ "ಮಿ. ಬೀಸ್ಟ್​' ಎಂದೇ ಜನಪ್ರಿಯವಾಗಿರುವ ಯುಟ್ಯೂಬರ್​ ಜಿಮ್ಮಿ ಡೊನಾಲ್ಡ್​ಸನ್​ ಜತೆಗಿನ ಬೇಸ್​ಬಾಲ್​ ಚಾಲೆಂಜ್​ನಲ್ಲಿ 95 ಲಕ್ಷ ರೂ. (1 ಲಕ್ಷ ಡಾಲರ್​) ಬಹುಮಾನ ಗೆದ್ದುಕೊಂಡಿದ್ದಾರೆ.

ಫುಟ್​ಬಾಲ್​ ತಾರೆ ಎರ್ಲಿಂಗ್​ ಹಾಲೆಂಡ್​ ಮತ್ತು ಬಾಸ್ಕೆಟ್​ಬಾಲ್​ ದಿಗ್ಗಜ ಲೆಬ್ರೋನ್​ ಜೇಮ್ಸ್​ ಕೂಡ ಈ ಚಾಲೆಂಜ್​ನಲ್ಲಿ ಪಾಲ್ಗೊಂಡಿದ್ದರು. ಈ ಚಾಲೆಂಜ್​ ಅನ್ವಯ 3 ಚೆಂಡುಗಳನ್ನು ಮೈದಾನದ ಹೊರಗೆ ಬಾರಿಸಬೇಕಾಗಿತ್ತು.

ಹಿಂದೆಂದೂ ಬೇಸ್​ಬಾಲ್​ ಆಟವನ್ನೇ ಆಡಿರದ ಹಾರ್ದಿಕ್​ ಈ ಆಟದಲ್ಲಿ ವಿಜೇತರಾಗಿ ಹೊರಹೊಮ್ಮಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಗೆದ್ದ ಬಹುಮಾನ ಮೊತ್ತವನ್ನು ಭಾರತದ ಎನ್​ಜಿಎ ಒಂದಕ್ಕೆ ದತ್ತಿನಿಧಿಯಾಗಿ ನೀಡಲು ನಿರ್ಧರಿಸಿದ್ದಾರೆ.