ಕ್ರೀಡೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಶೂನ್ಯ ಸುತ್ತಿದವರು ಇವರೇ

rameshmysuru

ಬೆಂಗಳೂರು: ಕ್ರಿಕೆಟ್‌ನಲ್ಲಿ ದಾಖಲೆಗಳಿಗೆ ಬರವಿಲ್ಲ. ಹೀಗಾಗಿ ದಾಖಲೆಗಳಿಗೂ ಕ್ರಿಕೆಟ್‌ಗೂ ಅವಿನಾಭಾವ ಸಂಬಂಧ. ಶ್ರೇಷ್ಠ ಬ್ಯಾಟ್ಸ್‌ಮನ್ ಒಬ್ಬ ಹೆಚ್ಚು ರನ್‌ಗಳಿಸಿದ ದಾಖಲೆ ಹೊಂದಿದ್ದರೆ, ಅದೇ ಬ್ಯಾಟ್ಸ್‌ಮನ್ ಎಷ್ಟು ಬಾರಿ ಶೂನ್ಯ ಸುತ್ತಿದ್ದಾನೆ ಎಂಬುದು ದಾಖಲೆಯಾಗಿ ಉಳಿದಿದೆ. ಅಗ್ರಕ್ರಮಾಂಕದಿಂದ ಕೆಳಕ್ರಮಾಂಕದವರೆಗೂ ಬ್ಯಾಟ್ಸ್‌ಮನ್‌ಗಳಿಗೆ ದಾಖಲೆ ಸೃಷ್ಟಿಸಲು ಅವಕಾಶವಿದೆ. ಹೀಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶೂನ್ಯ ಸುತ್ತಿದ ಬ್ಯಾಟ್ಸ್‌ಮನ್‌ಗಳ ವಿವರ ಇಲ್ಲಿದೆ. ಅತಿಹೆಚ್ಚು ಶೂನ್ಯ ಸುತ್ತಿದ ಅಗ್ರ ಐದು ಮಂದಿಯೂ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು.

ಕರ್ಟ್ಲಿ ವಾಲ್ಷ್‌ಗೆ ಅಗ್ರಸ್ಥಾನ : ವೆಸ್ಟ್ ಇಂಡೀಸ್ ತಂಡದ ಶ್ರೇಷ್ಠವೇಗದ ಬೌಲರ್ ಕರ್ಟ್ಲಿ ವಾಲ್ಷ್ ಅತಿಹೆಚ್ಚು ಬಾರಿ ಶೂನ್ಯಸುತ್ತಿದ ದಾಖಲೆ ಹೊಂದಿದ್ದಾರೆ. ವೇಗದ ಬೌಲಿಂಗ್ ಹೆಸರಾಗಿದ್ದ ವಾಲ್ಷ್ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯುತ್ತಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೂ 43 ಬಾರಿ ಶೂನ್ಯ ಸುತ್ತಿದ್ದಾರೆ. 17 ವರ್ಷಗಳ (1984-2001) ವೃತ್ತಿ ಜೀವನದಲ್ಲಿ 132 ಪಂದ್ಯಗಳನ್ನಾಡಿರುವ ವಾಲ್ಷ್ 43 ಬಾರಿ ಶೂನ್ಯ ಸುತ್ತಿದೆ, 61 ಬಾರಿ ಅಜೇಯರಾಗಿದ್ದಾರೆ.


 ಕ್ರಿಸ್ ಮಾರ್ಟಿನ್ (36): ನ್ಯೂಜಿಲೆಂಡ್‌ನ ವೇಗದ ಬೌಲರ್ ಕ್ರಿಸ್ ಮಾರ್ಟಿನ್ 13 ವರ್ಷ ವೃತ್ತಿ ಜೀವನದಲ್ಲಿ 71 ಟೆಸ್ಟ್ ಪಂದ್ಯಗಳಿಂದ 36 ಬಾರಿ ಶೂನ್ಯ ಸುತ್ತಿದ್ದಾರೆ. 233 ವಿಕೆಟ್ ಕಬಳಿಸಿ ಗಮನಸೆಳೆದಿದ್ದಾರೆ. ಆದರೆ ಅವರು ಎದುರಿಸಿದ್ದು ಕೇವಲ 615 ಎಸೆತಗಳಷ್ಟೇ

.

 ಗ್ಲೇನ್ ಮೆಕ್‌ಗ್ರಾತ್ (35) : ಆಸ್ಟ್ರೇಲಿಯಾದ ವೇಗದ ಬೌಲರ್ ಗ್ಲೇನ್ ಮೆಕ್‌ಗ್ರಾತ್ ಶೂನ್ಯ ಸುತ್ತಿದವರ ಪೈಕಿ 3ನೇ ಸ್ಥಾನದಲ್ಲಿದ್ದಾರೆ. ಮೆಕ್‌ಗ್ರಾತ್ ಆಡುತ್ತಿದ್ದ ವೇಳೆ ಆಸ್ಟ್ರೇಲಿಯಾ ಶ್ರೇಷ್ಠ ಬ್ಯಾಟಿಂಗ್ ಪಡೆ ಹೊಂದಿತ್ತು. ಬೌಲಿಂಗ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮೆಕ್‌ಗ್ರಾತ್‌ಗೆ ಬ್ಯಾಟಿಂಗ್ ಸಿಗುತ್ತಿದ್ದೆ ಅಪರೂಪವಾಗಿತ್ತು. ತಮ್ಮ ಕೈಯಲ್ಲಿ ಚೆಂಡು ತಿರುಗಿದಷ್ಟು ಗಟ್ಟಿಯಾಗಿ ಬ್ಯಾಟ್ ಹಿಡಿಯಲು ವಿಲರಾದರು. 1993 ರಿಂದ

2007ರವರೆಗೆ ರಾಷ್ಟ್ರೀಯ ತಂಡದ ಪರ ಆಡಿದ್ದ ಮೆಕ್‌ಗ್ರಾತ್ ಒಂದು ಅರ್ಧಶತಕ ಗಳಿಸಿದ್ದರು.

ಸ್ಟುವರ್ಟ್ ಬ್ರಾಡ್ (35 ಶೂನ್ಯ): ಇಂಗ್ಲೆಂಡ್‌ನ ಸರ್ವ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಇವರು ಒಬ್ಬರು. ಬೌಲರ್ ಆದರೂ ಬ್ಯಾಟಿಂಗ್‌ನಲ್ಲೂ ಕಮಾನ್ ಮಾಡಿದ್ದಾರೆ. 12 ಅರ್ಧಶತಕ ಹಾಗೂ ಏಕೈಕ

ಶತಕ ಸಿಡಿಸಿರುವ ಬ್ರಾಡ್ ಅದೇ ರೀತಿ ಹೆಚ್ಚು ಶೂನ್ಯ ಸುತ್ತಿದ ಕುಖ್ಯಾತಿಗೆ ಒಳಗಾಗಿದ್ದಾರೆ. 33 ವರ್ಷದ ಬ್ರಾಡ್ 35 ಬಾರಿ ಶೂನ್ಯ ಸುತ್ತಿದ್ದಾರೆ. ಇದುವರೆಗೂ 138 ಪಂದ್ಯಗಳನ್ನಾಡಿದ ಬ್ರಾಡ್, 3211 ರನ್ ಬಾರಿಸಿದ್ದಾರೆ.

ಶೇನ್ ವಾರ್ನ್ (34 ಶೂನ್ಯ) : ಚೆಂಡಿನ ಮಾಂತ್ರಿಕ ಶೇನ್ ವಾರ್ನ್ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ ಬೌಲರ್. 708 ವಿಕೆಟ್‌ಗಳ ಒಡೆಯ. ಮುತ್ತಯ್ಯ ಮುರಳೀಧರನ್ (800 ವಿಕೆಟ್) ಬಳಿಕ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿದ್ದಾರೆ.

ತಂಡ ಸಂಕಷ್ಟದಲ್ಲಿದ್ದ ವೇಳೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಿದ್ದ ಕೀರ್ತಿ ವಾರ್ನ್‌ಗೆ ಸಲ್ಲುತ್ತದೆ. ಆದರೂ 34 ಬಾರಿ ಡೌಕ್ ಆಗಿದ್ದಾರೆ. 15 ವರ್ಷದ ವೃತ್ತಿ ಜೀನವದಲ್ಲಿ 17 ಬಾರಿ ಅಜೇಯ ಸಾಧನೆ ಮಾಡಿದ್ದಾರೆ. 99 ರನ್‌ಗೆ ಔಟಾಗುವ ಮೂಲಕ ಶತಕ ತಪ್ಪಿಸಿಕೊಂಡಿದ್ದರು.