ಕೊಪ್ಪಳ: ಆಧುನಿಕ ಹಾಗೂ ತಂತ್ರಜ್ಞಾನ ಬೆಳೆದಂತೆ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದ್ದು, ಜಾನಪದ ಕಲೆ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಕಾರ್ಯ ನಡೆಯಬೇಕು ಎಂದು ಕಾಲೇಜು ಪ್ರಾಂಶುಪಾಲ ಉಮೇಶ ಹೇಳಿದರು.
ಇರಕಲ್‌ಗಡಾ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ಹಬ್ಬ-2023 ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ದೇಸಿ ಆಟಗಳು ಮನೋದೈಹಿಕ ವಿಕಾಸಕ್ಕೆ ಕಾರಣವಾಗುತ್ತಿದ್ದವು. ಇಂದಿನ ಆಧುನಿಕತೆಯಲ್ಲಿ ಕೆಲವೇ ಕೆಲವು ಆಟಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಜನಪದ ಹಬ್ಬ ಕಾರ್ಯಕ್ರಮದಲ್ಲಿ ದೇಶಿ ಆಟಗಳ ಸೊಗಡು ಮೂಡಿಬಂದಿದೆ ಎಂದರು.
ಇದನ್ನೂ ಓದಿ: “ಆಧುನಿಕ ಬಟ್ಟೆಗಳು ಲೈಂಗಿಕತೆಗೆ ಪ್ರಚೋದನಕಾರಿ ಎಂದು ಪರಿಗಣಿಸಬಾರದು”: ಮಹಿಳೆಯರ ನಿಂದನೆ ತಡೆಯಲು ‘ಸುಪ್ರೀಂ’ ಕೈಪಿಡಿ
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಇತಿಹಾಸ ವಿಭಾಗ ಹಾಗೂ ಪಾರಂಪರಿಕ ಕೂಟದ ಸಹಯೋಗದಲ್ಲಿ ಪ್ರೊ.ಆಶಾ ಸಿ ಹಾಗೂ ವೆಂಕಟೇಶ್ ನಾಯಕ ಕಾರ್ಯಕ್ರಮವನ್ನು ಸಂಯೋಜಿದರು.
ಐಕ್ಯೂಎಸಿ ಸಂಚಾಲಕರಾದ ಪ್ರೊ.ಪ್ರಕಾಶಗೌಡ ಎಸ್.ಯು, ಪ್ರೊ.ಅನಿತ ಎಂ, ಪ್ರೊ.ಚಿನ್ನತಾಯಮ್ಮ, ಪ್ರೊ.ಅನಿತ ಎಂ.ಪಾಟೀಲ್, ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ.ದಿವ್ಯಾ, ಪ್ರಥಮ ದರ್ಜೆ ಸಹಾಯಕ ಶ್ರೀಧರ್, ಉಪನ್ಯಾಸಕರಾದ ಜಗದೀಶ ಹೂಗಾರ, ಮಹೇಶ ಕುಮಾರ, ಮಹೆಬೂಬ್ ಪಾಶಾ, ಬಸವರಾಜ ಕಲ್ಮನಿ, ಸಂಗಮೇಶ್ವರ ಚನ್ನಪ್ಪ, ಸೋಮಶೇಖರ, ಇಬ್ರಾಹಿಂ ನದಾಪ್, ಅಮೂಲ್ಯ, ಸಾವಿತ್ರಿ, ನಾಗಪ್ಪ ಇತರರಿದ್ದರು.