ಬೆಂಗಳೂರು: ಬೆಳಗಾವಿ ತಂಡ ಐದನೇ ಆವೃತ್ತಿಯ ಮಿನಿ ಕರ್ನಾಟಕ ಕ್ರೀಡಾಕೂಟದ ಫುಟ್ಬಾಲ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬುಧವಾರ ನಡೆದ ಈಜು ಸ್ಪರ್ಧೆಯ ಜತೆಗೆ ಜಿಮ್ನಾಸ್ಟಿಕ್ಸ್, ಟೆನಿಸ್ನಲ್ಲಿ ಬೆಂಗಳೂರು ನಗರದ ಕ್ರೀಡಾಪಟುಗಳು ಮೇಲುಗೈ ಸಾಧಿಸಿದರೆ, ಅಥ್ಲೆಟಿಕ್ಸ್ನಲ್ಲಿ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ತುಮಕೂರು ಜಿಲ್ಲೆಯ ಕ್ರೀಡಾಪಟುಗಳು ಪದಕ ಒಲಿಸಿಕೊಂಡರು. ಜಿಮ್ನಾಸ್ಟಿಕ್ಸ್ನ ಬಾಲಕರ ವಿವಿಧ ಸ್ಪರ್ಧೆಗಳಲ್ಲಿ ಬೆಂಗಳೂರು ನಗರ ಸಿದ್ದಾರ್ಥ್ ಗುಪ್ತಾ ಒಟ್ಟು ಆರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕೂಟದ ಐದನೇ ದಿನ 48 ಸ್ಪರ್ಧೆಗಳಲ್ಲಿ ತಲಾ 48 ಚಿನ್ನ, ಬೆಳ್ಳಿ ಜತೆಗೆ 52 ಕಂಚಿನ ಪದಕ ವಿಜೇತರನ್ನು ನಿರ್ಧರಿಸಲಾಯಿತು.
ಬಿಡಿಎಫ್ಎ ಸ್ಟೇಡಿಯಂನಲ್ಲಿ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಬೆಳಗಾವಿ ತಂಡ 1-0 ಗೋಲಿನ ಅಂತರದಿಂದ ಮೈಸೂರು ತಂಡವನ್ನು ಮಣಿಸಿ ಚಿನ್ನ ಗೆದ್ದಿತ್ತು. ಕೆಎಸ್ಎಲ್ಟಿಯಲ್ಲಿ ನಡೆದ ಟೆನಿಸ್ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ರಣವೀರ್ ಗೌಲಿ, ಸಾನ್ವಿ ಮೋಹನ್ ಕ್ರಮವಾಗಿ ಬಾಲಕರ-ಬಾಲಕಿಯರ ಸಿಂಗಲ್ಸ್ ಜತೆಗೆ ಡಬಲ್ಸ್ನಲ್ಲೂ ಸ್ವರ್ಣ ಪದಕ ಗೆದ್ದರು. ಬಾಲಕರ ಸಿಂಗಲ್ಸ್ನಲ್ಲಿ ರಜತ ಗೆದ್ದ ನಿಹಾಲ್ ಎಸ್ ರೆಡ್ಡಿ, ಡಬಲ್ಸ್ನಲ್ಲಿ ರಣವೀರ್ ಜತೆಗಾರನಾಗಿದ್ದರು. ಬೆಂ.ದಕ್ಷಿಣದ ಕೆಂಪೇಗೌಡ ಕಂಚಿಗೆ ಸಮಾಧಾನ ಕಂಡರು. ಬಾಲಕಿಯರ ಸಿಂಗಲ್ಸ್ನಲ್ಲಿ ಪ್ರಿಯಾಲ್ ಸರ್ ಬೆಳ್ಳಿ, ಅವನಿ ಕಂಚು ಜಯಿಸಿದರು. ಡಬಲ್ಸ್ನಲ್ಲಿ ಪ್ರಿಯಾಲ್-ಸಾನ್ವಿ ಚಿನ್ನ ಗೆದ್ದರೆ, ಮೈಸೂರಿನ ಹಿತರಾಜ್-ಋತುವಿ ರಜತ, ಮಂಡ್ಯದ ಗ್ರಂಥನಾ-ಅಮೀರಾ ಕಂಚಿಗೆ ಸಮಾಧಾನಪಟ್ಟರು. ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ನಲ್ಲೂ ಬೆಂಗಳೂರು ನಗರದ ಬಾಲಕ-ಬಾಲಕಿಯರ ತಂಡ ಟೀಮ್ ಚಾಂಪಿಯನ್ಷಿಪ್ ಗೆದ್ದರೆ, ತುಮಕೂರು, ಧಾರವಾಡ ತಂಡಗಳು ಕ್ರಮವಾಗಿ ರಜತ, ಕಂಚು ಗೆದ್ದವು. ಅನ್ಇವನ್ ಬಾಲಕಿಯರ ವಿಭಾಗದಲ್ಲೂ ಬೆಂ.ನಗರ ತಂಡ ಚಾಂಪಿಯನ್ ಎನಿಸಿತು.
ಇತರ ಫಲಿತಾಂಶ (ಕ್ರಮವಾಗಿ ಬಾಲಕಿಯರ-ಬಾಲಕರ ವಿಭಾಗದ ಚಿನ್ನ ವಿಜೇತರು ಮಾತ್ರ): ಈಜು: 200 ಮೀ. ಬ್ಯಾಕ್ಸ್ಟ್ರೋಕ್ (ಬಾಲಕಿ-ಬಾಲಕರ ವಿಭಾಗ): ಸುನೇಧಾ ವೆನಿಗಲ್ಲ, ಲೋಹಿತಶ್ವ ನಾಗೇಶ್ (ಬೆಂ.ನಗರ); ಬ್ರೆಸ್ಟ್ ಸ್ಟ್ರೋಕ್ 200 ಮೀ: ಸಿರಿ ಪ್ರೀತಂ, ಆಶಿತ್ ಕುಮಾರ್;50 ಮೀ,: ಸಿರಿ, ಸುಯಶ್ ಜೈನ್, ಬಟರ್ ್ಲೈ 100 ಮೀ.: ಮಾನ್ಯಾ ಆರ್ ವಾಧ್ವ, ವ್ಯಾಸ್ ವಿಜಯ್; ಫ್ರೀಸ್ಟೈಲ್ 1,500 ಮೀ.; ಜರನ ಸಿಸೋಡಿಯಾ, ಪವನ್ ಕುಮಾರ್; 4/100 ರಿಲೇ: ಝೀ ಸ್ವಿಮ್ ಅಕಾಡೆಮಿ; 50 ಮೀ.:ಜ್ಯೋತಿರ್ಮಯಿ, ವ್ಯಾಸ್ ವಿಜಯ್; ಮಿಡ್ಲೆ 200 ಮೀ.: ಸುಮನ್ವಿ, ಸಮರ್ಥ್ ವಿಕ್ರಮ್;4/100 ಮೀ. ರಿಲೇ: ಬಸವನ ಗುಡಿ ಅಕ್ವಾಟಿಕ್, 4/50 ಮೀ: ಝೀ ಸ್ವಿಮ್ ಅಕಾಡೆಮಿ.
ಅಥ್ಲೆಟಿಕ್ಸ್: 400 ಮೀ. ಓಟ: ಹರಿಣಿ (ಬೆಂ.ನಗರ),ನಮಿಷ್ ಪಿ (ಶಿವಮೊಗ್ಗ); ಹೈಜಂಪ್: ವಿ.ಅಪೂರ್ವ (ಬಳ್ಳಾರಿ), ಪ್ರಥಮ್ ಶೆಟ್ಟಿ (ಉಡುಪಿ), ಬಾಲಕಿಯರ ಜಾವೆಲಿನ್ ಥ್ರೋ: ತನ್ವಿ (ಬೆಂ.ನಗರ), ಬಾಲಕರ ಶಾಟ್ಪುಟ್: ಆರ್ಯನ್ (ಉಡುಪಿ).
ಟೆಕ್ವಾಂಡೋ: ಬಾಲಕರ 54+ ಕೆಜಿ: ಲಮಿಚ್ ಜಾನ್ (ಕೋಲಾರ), -31 ಕೆಜಿ: ಕಾರ್ತಿಕ್ (ಬೆಂ.ನಗರ), ಪೋಮ್ಸ್:ವಿಹಾನ್ ಜೈದೀಪ್ (ಬೆಂ.ನಗರ); ಬಾಲಕಿಯರ -30: ಗಗನ; -34: ಮೌಲ್ಯ;ಪೋಮ್ಸ್: ಆಧ್ಯಾ ಜೆ. (ಎಲ್ಲರೂ ಬೆಂ.ನಗರ). ಬಾಲಕಿಯರ ಜಿಮ್ನಾಸ್ಟಿಕ್ಸ್ನ ವಿವಿಧ ಸ್ಪರ್ಧೆ: ಅಮಿ ಚಕ್ರವರ್ತಿ (ಬೆಂ.ನಗರ), ತಾರಾ ಸೂರ್ಯವಂಶಿ (ಬೆಂ.ನಗರ), ಧ್ವನಿ (ಬೆಂ.ನಗರ.