ಕ್ರೀಡೆ

ಫುಟ್​​​ಬಾಲ್​ ತಂಡದ ಮುಖ್ಯಸ್ಥೆ ಜತೆ ಇಂಗ್ಲೆಂಡ್ ಮಹಿಳಾ ತಂಡದ​ ಸ್ಟಾರ್​ ಕ್ರಿಕೆಟರ್ ನಿಶ್ಚಿತಾರ್ಥ!

ಲಂಡನ್​: ಇಂಗ್ಲೆಂಡ್​ ಮಹಿಳಾ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ್ತಿ ಡೇನಿಯಲ್ ವ್ಯಾಟ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಶೇಷ ಘೋಷಣೆಯೊಂದನ್ನು ಮಾಡಿದ್ದಾರೆ. ಜಾರ್ಜಿ ಹಾಡ್ಜ್ ಎಂಬುವರ ಜತೆ ವ್ಯಾಟ್​ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಿದ್ದಾರೆ.

ತಮ್ಮ ಸಂಗಾತಿಯ ತುಟಿಗೆ ಚುಂಬಿಸುತ್ತಾ ಎಂಗೇಜ್​ಮೆಂಟ್​ ರಿಂಗ್​ ಪ್ರದರ್ಶಿಸುತ್ತಿರುವ ಫೋಟೋವನ್ನು ವ್ಯಾಟ್​ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಎಂದೆಂದಿಗೂ ನನ್ನದು ಎಂದು ಅಡಿಬರಹ ನೀಡಿದ್ದಾರೆ.

ಅಂದಹಾಗೆ ಜಾರ್ಜಿ ಹಾಡ್ಜ್ ಅವರು ಸಿಎಎ ಬೇಸ್‌ನಲ್ಲಿ ಮಹಿಳಾ ಫುಟ್‌ಬಾಲ್‌ನ ಮುಖ್ಯಸ್ಥರಾಗಿದ್ದಾರೆ ಮತ್ತು ಲಂಡನ್‌ನಲ್ಲಿ ಎಫ್​ಎ ಪರವಾನಗಿ ಪಡೆದ ಏಜೆಂಟ್ ಆಗಿದ್ದಾರೆ. 31 ವರ್ಷ ವ್ಯಾಟ್​, ಇಂಗ್ಲೆಂಡ್​ ಮಹಿಳಾ ತಂಡದ ಪರವಾಗಿ 102 ಏಕದಿನ ಮತ್ತು 143 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಮಹಿಳೆಯರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವ್ಯಾಟ್​ ತಂಡದ ಭಾಗವಾಗಿದ್ದಾರು. ಇತ್ತೀಚೆಗೆ ನಡೆದ ಕೇಬಲ್​ ಕಾರು ಅಪಘಾತದ ಭಯಾನಕ ಅನುಭವವನ್ನು ಬಹಿರಂಗಪಡಿಸಿದ್ದರು.

ನಗರದ ಮೇಲಿರುವ ಪ್ರಸ್ಥಭೂಮಿಯ ವರೆಗೆ 1,000 (3,200 ಅಡಿ) ಮೀಟರ್​ಗೂ ಹೆಚ್ಚು ಸುತ್ತುವ ಸವಾರಿಯಲ್ಲಿ ವ್ಯಾಟ್ ಮತ್ತು ಅವರ ತಂಡದ ಸದಸ್ಯರು ಇತ್ತೀಚೆಗೆ ಸೇರಿಕೊಂಡರು. ನಾವು ಕೇಬಲ್ ಕಾರ್ ಹತ್ತುವ ಮೊದಲು ಕೆಲವು ತಾಂತ್ರಿಕ ಸಮಸ್ಯೆಗಳು ನನ್ನನ್ನು ತುಂಬಾ ಉದ್ವಿಗ್ನಗೊಳಿಸಿದವು ಮತ್ತು ತೇಲಾಡಿಸಿತು. ನಿಜಕ್ಕೂ ಇದು ಭಯಾನಕ ಅನುಭವವಾಗಿದೆ. ನಾನು ಆ ಪರ್ವತವನ್ನು ಶೀಘ್ರದಲ್ಲೇ ಮತ್ತೆ ಏರುತ್ತೇನೆ ಎಂದು ಭಾವಿಸುವುದಿಲ್ಲ. ನಾನು ಇನ್ನೆಂದೂ ಆ ಕೇಬಲ್ ಕಾರಿನಲ್ಲಿ ಹೋಗುವುದಿಲ್ಲ. ಲೋಡ್ ಶೆಡ್ಡಿಂಗ್​ನಿಂದ ಒಮ್ಮೆ ಕರೆಂಟ್ ಹೋದರೆ ಮುಗಿಯಿತು ಎಂದು ಹೇಳಿಕೊಂಡಿದ್ದರು. (ಏಜೆನ್ಸೀಸ್​)