ಕ್ರೀಡೆ

ICC T20 WC 2024: ಇವರಿಗೆ ಗೆಲ್ಲುವ ಅವಕಾಶವೇ ಇಲ್ಲ! ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ

ಅಮೆರಿಕಾ: ಇಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ನ ಹೈವೋಲ್ಟೇಜ್​ ಪಂದ್ಯಕ್ಕೆ ಇದೀಗ ಭಾರೀ ಕೌತುಕ ಹೆಚ್ಚಿದ್ದು, ರೋಚಕ ಪಂದ್ಯದಲ್ಲಿ ಯಾರ ಮುಡಿಗೆ ಗೆಲುವು ಸೇರಲಿದೆ? ಎಂಬುದೇ ದೊಡ್ಡ ಮಟ್ಟದ ಚರ್ಚೆಯಾಗಿದೆ. ವಿಶ್ವಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ಹೈವೋಲ್ಟೇಜ್​ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದು, ಟೀಂ ಇಂಡಿಯಾದ ಮೇಲೆ ಹೆಚ್ಚಿನ ಭರವಸೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕ್ರಿಕೆಟ್​ ದಿಗ್ಗಜರು ಮತ್ತು ಮಾಜಿ ಕ್ರಿಕೆಟಿಗರು ಪಂದ್ಯದ ಕುರಿತು ಹಲವಾರು ವಿಷಯಗಳನ್ನು ಚರ್ಚೆ ಮಾಡಿದ್ದು, ಪಾಕಿಸ್ತಾನ ಮತ್ತು ಭಾರತ ತಂಡದ ಪಾಸಿಟಿವ್ ಮತ್ತು ನೆಗೆಟಿವ್​ಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇದೆಲ್ಲದರ ನಡುವೆ ಇಂಗ್ಲೆಂಡ್​ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೈಕೆಲ್ ವಾಘನ್ ಮಾತ್ರ ನೇರವಾಗಿ ಈ ಟೀಮ್​ ಸೋಲುತ್ತದೆ ಎಂದು ಭವಿಷ್ಯ ನುಡಿದಿರುವುದು ಇದೀಗ ಭಾರೀ ಟೀಕೆಗೆ ಕಾರಣವಾಗಿದೆ.

ಡಲ್ಲಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನಕ್ಕೆ ವ್ಯಾಪಕ ಛೀಮಾರಿ ವ್ಯಕ್ತವಾಗಿತ್ತು. ತಂಡದ ಕ್ಯಾಪ್ಟನ್ ಬಾಬರ್​ ಆಜಂ ಮತ್ತು ಸಹ ಆಟಗಾರರನ್ನು ನೆಟ್ಟಿಗರು ಟ್ರೋಲ್ ಮಾಡುವ ಮೂಲಕ ತೀವ್ರ ಕಿಡಿಕಾರಿದ್ದರು.

ಸದ್ಯ ಇದೇ ವಿಷಯವನ್ನೇ ಮುಂದಿಟ್ಟು ಮಾತನಾಡಿದ ವಾನ್, “ನಾನು ಅವರನ್ನು ಓವಲ್‌ನಲ್ಲಿ ಗಮನಿಸಿದೆ. ಅವರು ತುಂಬಾ ಸಾಧಾರಣವಾಗಿ ಕಾಣುತ್ತಿದ್ದರು. ಅವರಲ್ಲಿ ಅಷ್ಟು ಸಾಮರ್ಥ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಪಾಕ್​ 140 ರನ್ ಗುರಿಯನ್ನು ಬೆನ್ನಟ್ಟಬಹುದೇ ವಿನಃ 160-170 ರನ್​ ಆದರೆ ಪೈಪೋಟಿ ಕೊಡಲು ಸಾಧ್ಯವಿಲ್ಲ. ಭಾರತ ವಿರುದ್ಧ ಪಾಕಿಸ್ತಾನಕ್ಕೆ ಗೆಲ್ಲುವ ಚಾನ್ಸ್ ಇಲ್ಲ" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).