ಕ್ರೀಡೆ

ಮರಾಠಿ ನಟಿ ಆದಿತಿ ಡ್ರಾವಿಡ್​ಗೆ ರಾಹುಲ್​ ಡ್ರಾವಿಡ್​ ಏನಾಗಬೇಕು? ವೈರಲ್​ ಆಗುತ್ತಿದೆ ನಟಿಯ ಫೋಟೋಗಳು…

ನವದೆಹಲಿ: ಕೆಲವೊಮ್ಮೆ ಕೆಲವರು ತಮ್ಮ ಸರ್​ನೇಮ್​ಗಳಿಂದಲೇ ಫೇಮಸ್​ ಆಗಿಬಿಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಅದಿತಿ. ಈಕೆ ಮಠಾಠಿ ನಟಿಯಾದರೂ ಈಗ ತನ್ನ ಸರ್​ನೇಮ್​ ಕಾರಣದಿಂದ ದೇಶದೆಲ್ಲೆಡೆ ಗಮನ ಸೆಳೆದಿದ್ದಾರೆ. ಅದಿತಿಯ ಪೂರ್ತಿ ಹೆಸರು ಅದಿತಿ ಡ್ರಾವಿಡ್​. ಡ್ರಾವಿಡ್​ ಸರ್​ನೇಮ್​ ಕೇಳಿದ ಕೂಡಲೇ ನಮಗೆ ನೆನಪಾಗುವುದು ವಾಲ್​ ಆಫ್​ ಕ್ರಿಕೆಟ್​ ಖ್ಯಾತಿಯ ರಾಹುಲ್​ ಡ್ರಾವಿಡ್​. ಅವರಿಗೂ ಅದಿತಿಗೂ ಏನಾದರೂ ಸಂಬಂಧ ಇದೆಯಾ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಹೌದು.

ಪ್ರಸ್ತುತ ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿರುವ ರಾಹುಲ್ ಡ್ರಾವಿಡ್​ ವಿಶ್ವಕಪ್​ನಲ್ಲಿ ಬಿಜಿಯಾಗಿದ್ದಾರೆ. ಅದಿತಿಗೆ ರಾಹುಲ್​ ಡ್ರಾವಿಡ್​ ಅವರು ಸಂಬಂಧಿಯಾಗಬೇಕು. ಯಾವ ರೀತಿಯ ಸಂಬಂಧ ಎಂಬುದನ್ನು ತಿಳಿಯುವ ಮುನ್ನ ಮೊದಲ ಅದಿತಿ ಬಗ್ಗೆ ತಿಳಿಯೋಣ.

ಅದಿತಿ ಡ್ರಾವಿಡ್​ ಮರಾಠಿಯ ಪ್ರತಿಭಾವಂತ ನಟಿ. ಅದಿತಿ ಎಂಬುದು ನಿಕ್​ ನೇಮ್​ ಆಗಿದ್ದರೂ ಆಕೆಯ ಪೂರ್ಣ ಹೆಸರು ಅದಿತಿ ವಿನಾಯಕ್​ ಡ್ರಾವಿಡ್​. ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಅದಿತಿ, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ತಮ್ಮ ಸೌಂದರ್ಯ ಹಾಗೂ ನಟನೆಯಿಂದಲೇ ಅದಿತಿ ಎಲ್ಲರನ್ನೂ ಮೋಡಿ ಮಾಡುತ್ತಿದ್ದಾರೆ.

ಅದಿತಿ ಡ್ರಾವಿಡ್​ ಪುಣೆಯ ಅಭಿನವ ವಿದ್ಯಾಲಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪುಣೆಯ ಬಿಎಂಸಿಸಿಯಲ್ಲಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದರು. ಎಲ್ಲಿಯೂ ತಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಹೇಳಿಕೊಳ್ಳದ ಅದಿತಿ, ಸದ್ಯ ಮದುವೆಯಾಗದೇ ಬ್ಯಾಚುಲರ್​ ಜೀವನ ಎಂಜಾಯ್​ ಮಾಡುತ್ತಿದ್ದಾರೆ. ಬಾಯ್​ಫ್ರೆಂಡ್ ಯಾರದಾದರೂ ಇದ್ದರೂ ಆತ ಯಾರು ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಅದಿತಿ ಮರಾಠಿ ಟಿವಿ ಉದ್ಯಮಕ್ಕೆ "ಮಜ್ಯಾ ನವ್ರಾಚಿ ಬಾಯ್ಕೊ" ಧಾರಾವಾಹಿ ಮೂಲಕ ಪದಾರ್ಪಣೆ ಮಾಡಿದರು. ಅವರ ನಟನೆಯ ಧಾರಾವಾಹಿಗಳಲ್ಲಿ "ಡಾ. ಬಾಬಾಸಾಹೇಬ್​ ಅಂಬೇಡ್ಕರ್, ಮಜ್ಯಾ ನವ್ರಾಚಿ ಬಾಯ್ಕೊ ಮತ್ತು ಸುಂದ್ರ ಮನಮಧ್ಯೆ ಭರಾಲಿ ಸೇರಿವೆ. ಅದಿತಿ ಇನ್ನೂ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಛಾಪು ಮೂಡಿಸಿಲ್ಲ. ಅದಿತಿ ದ್ರಾವಿಡ್ ತನ್ನ ಉಡುಪಿನ ಬ್ರಾಂಡ್ "ದಿ ಡ್ರೆಸ್ವಾಲಿ. ಕಂ" ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ಈಉ ದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಸಲಿ ವಿಚಾರದ ಕಡೆಗೆ ಬರುವುದಾದರೆ, ರಾಹುಲ್​ ಡ್ರಾವಿಡ್​, ಅದಿತಿಗೆ ಅಂಕಲ್​ ಆಗಬೇಕು. ರಾಹುಲ್‌ ದ್ರಾವಿಡ್‌ ಅವರನ್ನು ತಮ್ಮ ಸಂಬಂಧಿ ಎಂದು ಹೇಳಿಕೊಂಡಿರುವ ಆದಿತಿ ದ್ರಾವಿಡ್‌, ತಮ್ಮ ತಂದೆ-ತಾಯಿಯ ವಿಚಾರಗಳನ್ನು ಹೆಚ್ಚಾಗಿ ಗೌಪ್ಯವಾಗಿ ಇರಿಸಿದ್ದಾರೆ. ರಾಹುಲ್​ ಹುಟ್ಟುಹಬ್ಬದ ಸಂದರ್ಭದಲ್ಲಿ ಅದಿತಿ ಶುಭಕೋರಿದ್ದರು. ಅಲ್ಲದೆ, ತಮ್ಮ ಬಾಲ್ಯದಲ್ಲಿ ಚಿಕ್ಕಪ್ಪ ರಾಹುಲ್​ ಜತೆ ತೆಗೆಸಿದ ಫೋಟೋವನ್ನು ಸಹ ಅದಿತಿ ಹಂಚಿಕೊಂಡಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಅದಿತಿ ದ್ರಾವಿಡ್ ಅವರ ಸಂಬಂಧವೂ ಆಕೆಗೆ ಅಪಾರ ಹೆಮ್ಮೆಯ ಮೂಲವಾಗಿದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)