ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕರೊನಾ ಪರಿಹಾರ ಕಾರ್ಯಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನದ ಮೂಲಕ ಬರೋಬ್ಬರಿ 11 ಕೋಟಿ ರೂಪಾಯಿ ಮೊತ್ತವನ್ನು ಕಲೆಹಾಕಿದೆ.
ವಿರೂಷ್ಕಾ ದಂಪತಿ ಈ ಅಭಿಯಾನಕ್ಕೆ ತಾವೇ 2 ಕೋಟಿ ರೂ. ನೀಡಿದ್ದರು. ಮೊದಲಿಗೆ 7 ಕೋಟಿ ರೂ. ಸಂಗ್ರಹಿಸುವ ಗುರಿ ಇರಿಸಲಾಗಿತ್ತು. ಇದೀಗ 11 ಕೋಟಿ ರೂ.ಗೆ ಏರಿಕೆ ಕಂಡಿದೆ. ಕೊಹ್ಲಿ ಪ್ರಚಾರ ರಾಯಭಾರಿಯಾಗಿರುವ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಈ ಅಭಿಯಾನಕ್ಕೆ 5 ಕೋಟಿ ರೂ. ದೇಣಿಗೆ ನೀಡಿದೆ.
ಪಂಜಾಬ್ ಕಿಂಗ್ಸ್‌ನಿಂದಲೂ ಸಂಗ್ರಹ: ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಕೂಡ ಕರೊನಾ ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದು, ಇದುವರೆಗೆ 70.85 ಲಕ್ಷ ರೂ. ಸಂಗ್ರಹಿಸಿದೆ.