ಬಿಗ್ ಬಾಸ್ 20 ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿರುವ ಬಾಕ್ಸಿಂಗ್ ದಿಗ್ಗಜೆ ಮೇರಿ ಕೋಮ್ 
ಕ್ರೀಡೆ

Bigg Boss 20ಗೆ ಮೇರಿ ಕೋಮ್ ಎಂಟ್ರಿ; “ನನ್ನ ಜೀವನದ ಎಲ್ಲಾ ಸತ್ಯ ಬಿಚ್ಚಿಡುತ್ತೇನೆ” ಎಂದ ಬಾಕ್ಸಿಂಗ್ ದಿಗ್ಗಜೆ! Mary Kom enters Bigg Boss

ಮುಂಬೈ: ಬಾಕ್ಸಿಂಗ್ ಕ್ರೀಡೆ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಮೇರಿ ಕೋಮ್ (Mary Kom enters Bigg Boss)​ ಈಗ ಹಿಂದಿ ಭಾಷೆಯಲ್ಲಿ ಪ್ರಸಾರವಾಗಲಿರುವ ಬಿಗ್​ಬಾಸ್​ ಸೀಸನ್​ 20 ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ​
ಕೆಲ ತಿಂಗಳುಗಳ ಹಿಂದೆ ತಮ್ಮ ವೈವಾಹಿಕ ಜೀನವದಿಂದ ಮುನ್ನೆಲೆಗೆ ಬಂದಿದ್ದ ಮೇರಿ, ಆ ಸಮಯದಲ್ಲಿ ಪುರುಷರ ಬಗ್ಗೆ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತಿ. ಈಗ ಬಿಗ್​ ಬಾಸ್​ ಮನೆ ಸೇರಲು ಮೇರಿ ಸಿದ್ಧವಾಗಿದ್ದು, ಜನರಿಗೆ ಭರ್ಪೂರ್​ಎಂಟರ್ಟೈನ್ಮೆಂಟ್ ಸಿಗಲಿದೆ ಎನ್ನಬಹುದಾಗಿದೆ.

ನಾನು ಎಲ್ಲಾ ಸತ್ಯವನ್ನು ಬಿಚ್ಚಿಡಲಿದ್ದೇನೆ!

ವೇದಿಕೆ ಮೇಲೆ ಮಾತನಾಡಿದ ಮೇರಿ, ಇಷ್ಟು ವರ್ಷದ ಬಾಕ್ಸಿಂಗ್​ ಜರ್ನಿ ನನಗೆ ತಾಳ್ಮೆ, ಸಹನ ಶೀಲತೆ ಹಾಗೂ ನಿರಂತರ ಹೋರಾಡುವುದನ್ನು ಕಲಿಸಿಕೊಟ್ಟಿದೆ. ಆದರೆ ನಾನು ಇಲ್ಲಿವರೆಗೆ ಬಿಗ್​ಬಾಸ್​​ನ ಯವುದೇ ಸೀಸನ್​ ಅನ್ನು ಸಂಪೂರ್ಣವಾಗಿ ನೋಡಿಲ್ಲ.
ಆದರೆ, ನಾನಿಲ್ಲಿ ನನ್ನ ನೈಜ ವ್ಯಕ್ತಿತ್ವವನ್ನು ತೋರಿಸಲಿದ್ದೆನೆ. ಕೆಲ ಸಮಯದ ಹಿಂದೆ ನನ್ನ ವೈವಾಹಿಕ ಜೀವನದ ಕುರಿತು ಕೆಲ ವದಂತಿಗಳು ಹಾಗೂ ವಿವಾದಗಳು ಸಾಕಷ್ಟು ಸದ್ದು ಮಾಡಿದ್ದವು. ಆದರೆ ನಾನಿಲ್ಲಿ ಎಲ್ಲಾ ಸತ್ಯವನ್ನು ಬಿಚ್ಚಿಡಲಿದ್ದೇನೆ. ನಾನು ನನ್ನ ಜೀವನದಲ್ಲಿ ಏನೇನು ಕಷ್ಟಗಳನ್ನು ಅನುಭವಿಸಿದ್ದೇನೆಂದು ಜನರಿಗೆ ತಲುಪಿಸಲಿದ್ದೇನೆಂದು ಮೇರಿ ಕೋಮ್​ ಹೇಳಿದ್ದಾರೆ.
ಮೇರಿ ಮಾಡಿದ್ದ ವಿವಾದವೇನು?
ಕೆಲ ತಿಂಗಳುಗಳ ಹಿಂದೆ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೇರಿಗೆ, ಸಂದರ್ಶಕರು ನಿಮ್ಮ ಮಾಜಿ ಪತಿ ಕೋಮ್ ಓನ್ಲರ್ ನಿಮಗಾಗಿ ಹಲವು ರೀತಿಯ ತ್ಯಾಗ ಮಾಡಿದ್ದರಲ್ಲವೇ? ಎಂದು ಕೇಳಿದ್ದರು. ಈ ಪ್ರಶ್ನೆಗೆ ಕೆಂಡಾಮಂಡಲಗೊಂಡ ಮೇರಿ, ಕೋಮ್ ಓನ್ಲರ್ ಅವರನ್ನು ಕಟುವಾಗಿ ಟೀಕಿಸುತ್ತಾ, ಅವನು ಜೀವಮಾನದಲ್ಲಿ ಒಂದೇ ಒಂದು ರೂಪಾಯಿಯನ್ನು ಗಳಿಸಲಿಲ್ಲ, ನಾನು ಬಾಕ್ಸಿಂಗ್​ನಲ್ಲಿ ಗಳಿಸಿದ ಹಣದಲ್ಲೇ ಬದುಕಿದ ಮತ್ತು ಅದನ್ನೂ ಸಹ ಹಾಳುಗೇಡುವಿದ ಎಂದು ಆರೋಪಿಸಿದ್ದರು.
ಗಲ್ಲಿಗಳಲ್ಲಿ ಫುಟ್ಬಾಲ್ ಆಡುತ್ತಿದ್ದ, ಅದರಿಂದ ಇವನೇನು ಸುನಿಲ್ ಛೆಟ್ರಿ ಆಗಲಿಲ್ಲ ಎಂದು ತಮ್ಮ ಮಾಜಿ ಪತಿ ಕೋಮ್ ಓನ್ಲರ್​ನನ್ನು ಅಣುಕಿಸಿದ್ದರು. ಆದರೆ ಮೇರಿ ಅವರ ಈ ಹೇಳಿಕೆ ದೇಶದಾದ್ಯಂತ ಭಾರಿ ಸಂಚಲನವನ್ನು ಹುಟ್ಟುಹಾಕಿ, ಮೇರಿ ಕೋಮ್​​ರ ಹೇಳಿಕೆಗಳನ್ನು ಕಟುವಾಗಿ ಟೀಕಿಸಲಾಯಿತು.
ತಮ್ಮ ವಿರುದ್ಧ ವ್ಯಕ್ತವಾದ ವಿರೋಧಗಳಿಗೆ ಪ್ರತಿಕ್ರಿಯೆ ನೀಡಿದ ಮೇರಿ, ತಮ್ಮ ಹೇಳಿಕೆ ಉದ್ದೇಶ ಪುರುಷ ಸಮುದಾಯವನ್ನು ಮತ್ತು ಪುರುಷ ಕ್ರೀಡಾಪಟುಗಳ್ನು ಕೀಳಾಗಿ ಬಿಂಬಿಸುವುದಾಗಿರಲಿಲ್ಲ ಎಂದು ಸ್ಪಷ್ಟಿಕರಣ ನೀಡಿದ್ದರು.
ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಎಂದಿಗೂ ಸಮಾಜದ ಮುಂದೆ ಏನನ್ನು ಹಂಚಿಕೊಂಡವಳಲ್ಲ. ಆದರೆ ವಿಚ್ಛೇದನದ ನಂತರ ನನ್ನನ್ನು ದುರಸೆಯುಳ್ಳ ಮತ್ತು ಐಶಾರಾಮಿ ಜೀವನ ಬಯಸುವ ಮಹಿಳೆ ಎಂಬತ್ತೆ ಬಿಂಬಿಸಲಾಯಿತು ಎಂದು ಹೇಳಿದ್ದರು, (ಏಜನ್ಸೀಸ್​).