ಕ್ರೀಡೆ

ಮನು​-ನೀರಜ್​ ಮದುವೆ ಫಿಕ್ಸ್? ವದಂತಿಗಳ ಬೆನ್ನಲ್ಲೇ ಕಡೆಗೂ ಸ್ಪಷ್ಟನೆ ಕೊಟ್ಟ ಭಾಕರ್ ತಂದೆ

ನವದೆಹಲಿ: ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್ ಪದಕದಾಟದಲ್ಲಿ ಭಾರತಕ್ಕೆ ಎರಡು ಕಂಚು ಗೆದ್ದ ಮನು ಭಾಕರ್​ ಮತ್ತು ಒಂದು ಬೆಳ್ಳಿ ಮೆಡಲ್ ಗಿಟ್ಟಿಸಿಕೊಂಡ ನೀರಜ್ ಚೋಪ್ರಾ ಮಧ್ಯೆ ಮದುವೆ ಮಾತುಕತೆಗಳು ಸದ್ಯ ಬಹಳ ಸದ್ದು ಮಾಡುತ್ತಿವೆ. ಶೂಟಿಂಗ್​ನಲ್ಲಿ ಮನು ಎರಡು ಪದಕ ಗೆದ್ದರೆ, ಜಾವಲಿನ್​ ಎಸೆತದಲ್ಲಿ ಚೋಪ್ರಾ ಬೆಳ್ಳಿ ಸಾಧಿಸಿದರು. ಈ ಇಬ್ಬರು ಹೆಮ್ಮೆಯ ಭಾರತೀಯ ಸಾಧಕರು ಇದೀಗ ಮದುವೆ ವದಂತಿಯಲ್ಲಿ ಸಿಲುಕಿದ್ದು, ಅದಕ್ಕೆ ಪುಷ್ಟಿ ನೀಡುವಂತ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಇಷ್ಟು ದಿನ ಇಬ್ಬರ ಸಾಧನೆಗೆ ಮೆಚ್ಚಿ ಚಪ್ಪಾಳೆ ತಟ್ಟುತ್ತಿದ್ದ ನೆಟ್ಟಿಗರು ಈಗ ನಿಮ್ಮಿಬ್ಬರ ಜೋಡಿ ತುಂಬ ಚೆನ್ನಾಗಿದೆ. ನೀವಿಬ್ಬರು ಮದುವೆಯಾಗುತ್ತಿದ್ದರು ಎಂಬ ಸುದ್ದಿ ಕೇಳಿ ಖುಷಿಯಾಗಿದೆ. ಶೀಘ್ರವೇ ಶುಭಸುದ್ದಿ ನೀಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮೂಲಕ ಅಭಿಪ್ರಾಯಿಸುತ್ತಿದ್ದಾರೆ. ಮನು ಭಾಕರ್ ಮತ್ತು ನೀರಜ್ ಚೋಪ್ರಾ ಅವರ ಸಾಧನೆ ಹಾದಿಗಿಂತ ಅವರಿಬ್ಬರ ವಿವಾಹ ವಿಚಾರವೇ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರೀಡಾಪಟುಗಳ ಉತ್ತರಕ್ಕಾಗಿ ಕಾತರ ವ್ಯಕ್ತವಾಗುತ್ತಿದೆ.

ಈ ವಿಷಯ ಭಾರೀ ಚರ್ಚೆಯಾಗುತ್ತಿದ್ದಂತೆ ಇದೀಗ ಸ್ವತಃ ಮನು ಭಾಕರ್​ ಅವರ ತಂದೆ ರಾಮ್ ಕಿಶನ್ ಅವರೇ ವದಂತಿಗಳಿಗೆ ಪ್ರತಿಕ್ರಿಯಿಸಿದ್ದು, ಮಗಳ ವಯಸ್ಸಿನಲ್ಲಿ ಗಮನದಲ್ಲಿರಿಸಿ ಹೇಳುವುದಾದರೆ ಸದ್ಯ ಮದುವೆ ಬಗ್ಗೆ ಯಾವ ಯೋಚನೆಯೂ ಇಲ್ಲ. ಆಕೆ ಇನ್ನು ಚಿಕ್ಕವಳು. ಈಗ ವಿವಾಹವಾಗುವ ವಯಸ್ಸು ಕೂಡ ಅವಳದ್ದಲ್ಲ. ಹೀಗಿರುವಾಗ ಅದರ ಬಗ್ಗೆ ಯಾವುದೇ ಮಾತಿಲ್ಲ. ಮನು ಅವರ ತಾಯಿ ನೀರಜ್​ರನ್ನು ತನ್ನ ಸ್ವಂತ ಮಗನಂತೆ ಕಾಣುತ್ತಾರೆ ಅಷ್ಟೇ ಎಂದು ಹೇಳುವ ಮೂಲಕ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ,(ಏಜೆನ್ಸೀಸ್).