Manu Bhaker: ಕಝಾಕಿಸ್ತಾನದಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಏಷ್ಯಾ ಕಪ್ 2025ರ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ! ಸೂರ್ಯಕುಮಾರ್ ಯಾದವ್, ಗಿಲ್… | Team India Squad
ಎಂಟು ಮಹಿಳೆಯರ ಫೈನಲ್‌ನಲ್ಲಿ ಮನು 219.7 ಅಂಕಗಳನ್ನು ಗಳಿಸಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದರೆ, ಕೊರಿಯಾದ ಯಾಂಗ್ ಜಿಯಿನ್ (241.6) ಬೆಳ್ಳಿ ಪದಕ ಗೆದ್ದು ಎರಡನೇ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಇವರಿಬ್ಬರನ್ನು ಮೀರಿಸಿರುವ ಕ್ವಿಯಾಂಕೆ ಮಾ, 243.2 ಅಂಕಗಳಿಂದ ಅಗ್ರ ಸ್ಥಾನಕ್ಕೇರಿದ್ದಾರೆ.
ಜೂನಿಯರ್ ಸ್ಪರ್ಧೆಯಲ್ಲಿ, ರಶ್ಮಿಕಾ 241.9 ಅಂಕಗಳನ್ನು ಗಳಿಸಿದರೆ, ಕೊರಿಯಾದ ಸೆಯುಂಗ್‌ಹ್ಯುನ್ ಹಾನ್ (237.6) ಮತ್ತು ಯೆಜಿನ್ ಕಿಮ್ (215.1) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ 583 ಅಂಕಗಳನ್ನು ಪಡೆಯುವ ಮೂಲಕ ಮನು ಭಾಕರ್, ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮತ್ತೊಂದೆಡೆ, ಅವರ ಸಹಚರರಾದ ಸುರುಚಿ ಮತ್ತು ಪಾಲಕ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು,(ಏಜೆನ್ಸೀಸ್).