ಬೆಂಗಳೂರು: ಅನುಭವಿ ಬ್ಯಾಟರ್ ಮನೀಷ್ ಪಾಂಡೆ (105 ರನ್, 76 ಎಸೆತ, 15 ಬೌಂಡರಿ, 4 ಸಿಕ್ಸರ್) ಸಿಡಿಸಿದ ಭರ್ಜರಿ ಶತಕದ ಬಲದಿಂದ ಕರ್ನಾಟಕ ತಂಡ ಏಕದಿನ ವಿಶ್ವಕಪ್‌ಗೆ ಪೂರ್ವಸಿದ್ಧತೆಯಾಗಿ ನೆದರ್ಲೆಂಡ್ ತಂಡ ಆಡಿದ ಅಭ್ಯಾಸ ಪಂದ್ಯದಲ್ಲಿ 1 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಕರ್ನಾಟಕ ತಂಡ ಈ ಮುನ್ನ ಡಚ್ಚರ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲೂ ಗೆಲುವು ದಾಖಲಿಸಿತ್ತು.
ಆಲೂರು ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ ತಂಡ 47.5 ಓವರ್‌ಗಳಲ್ಲಿ 297 ರನ್‌ಗಳಿಗೆ ಸರ್ವಪತನ ಕಂಡಿತು. ಎಂ. ವೆಂಕಟೇಶ್ (56ಕ್ಕೆ 2), ಮನೋಜ್ ಭಾಂಡಗೆ (58ಕ್ಕೆ 2), ಪ್ರಣವ್ ಭಾಟಿಯಾ (49ಕ್ಕೆ 2) ಡಚ್ಚರಿಗೆ ಕಡಿವಾಣ ಹಾಕಿದರು. ಪ್ರತಿಯಾಗಿ ಕರ್ನಾಟಕ ತಂಡ 39.2 ಓವರ್‌ಗಳಲ್ಲಿ 9 ವಿಕೆಟ್‌ಗೆ 300 ರನ್ ಪೇರಿಸಿ ಗೆಲುವು ದಾಖಲಿಸಿತು. ಮನೀಷ್ ಪಾಂಡೆ ಚೇಸಿಂಗ್ ಸಾಹಸಕ್ಕೆ ಕೆಎಲ್ ಶ್ರೀಜಿತ್ (73) ಉತ್ತಮ ಬೆಂಬಲ ಒದಗಿಸಿದರು.