ಕ್ರೀಡೆ

ವಿಶ್ವಕಪ್​ ವೇಳೆ ಆದ ಕರಾಳ ಅನುಭವ ನೆನಸಿಕೊಂಡರೆ ಈಗಲೂ...; ಶಾಕಿಂಗ್​ ಹೇಳಿಕೆ ಕೊಟ್ಟ ಖ್ಯಾತ ನಟಿ

ಮುಂಬೈ: 1995ರಲ್ಲಿ ಕಿಂಗ್​ಖಾನ್​ ಶಾರುಖ್​ ನಟನೆಯ ದಿಲ್​ವಾಲೇ  ದುಲ್ಹನಿಯಾ ಲೇ ಜಾಯೇಂಗೆ (DDLJ) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಂದಿರಾ ಬೇಡಿ ಅಂದಿನ ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಆ ಬಳಿಕ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದ ಅವರು, 2003ರಲ್ಲಿ ಭಾರತದ ಅಥಿತ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ನ ಕಾಮೆಂಟರ್​ ಆಗಿ ಮತ್ತು ನಿರೂಪಕರಾಗಿ ಕೂಡ ಗುರುತಿಸಿಕೊಂಡಿದ್ದರು. ಆದರೆ ಕಾಮೆಂಟರಿ ವೇಳೆ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ, 2003ರಲ್ಲಿ ನಡೆದ ಏಕದಿನ ವಿಶ್ವಕಪ್​ ವೇಳೆ ಪಾನೆಲ್​ನಲ್ಲಿ ದಿಗ್ಗಜರ ಜತೆ ಕುಳಿತುಕೊಂಡು ಮಾತನಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ನಾನು ನೋಡಿದಂತೆ ಕ್ರಿಕೆಟ್​ಗೆ ಸಂಬಂಧಿಸಿದ ವಿಚಾರಗಳಲ್ಲಿ ಪಾನಲ್​ನಲ್ಲಿ ಮಹಿಳೆಯರು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ನನಗೆ ಇದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು.

ಕೆಲವೊಮ್ಮೆ ನಾನು ಪ್ರಶ್ನೆ ಕೇಳಿದಾಗ ಅವರು ಅದಕ್ಕೆ ಉತ್ತರಿಸದೆ ನನ್ನ ಮುಖವನ್ನು ನೋಡಿ ತಮ್ಮಪಾಡಿಗೆ ತಾವು ಮಾತನಾಡುತ್ತಿದ್ದರು. ಇದು ನನಗೆ ತುಂಬಾ ಬೇಸರವನ್ನುಂಟು ಮಾಡುತ್ತಿತ್ತು. ಕಾರ್ಯಕ್ರಮ ಮುಗಿದ ಬಳಿಕ ನಾನು ಅನೇಕ ಬಾರಿ ಇದನ್ನು ನೆನಪಿಸಿಕೊಂಡು ಅತ್ತಿದ್ದೇನೆ. ನನ್ನ ಜೊತೆ ಇದ್ದ ಮತ್ತೊಬ್ಬ ನಿರೂಪಕನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಮಾಜಿ ಆಟಗಾರರು ನಾನು ಕೇಳಿದಾಗ ಮಾತ್ರ ಯಾಕೆ ಮಾತನಾಡುತ್ತಿರಲಿಲ್ಲ ಎಂದು ಬೇಸರವಾಗುತ್ತಿತ್ತು. ಇದು ನನಗೆ ಕರಾಳ ಅನುಭವವನ್ನು ನೀಡಿತ್ತು.

ಆ ಬಳಿಕ ಈ ವಿಚಾರ ವಾಹಿನಿಯ ಗಮನಕ್ಕೆ ಬಂತು ಎಲ್ಲಿ ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೋ ಎಂಬ ಭಯವಿತ್ತು. ಆ ನಂತರ ಅವರು ನನ್ನಲ್ಲಿ ವಿಒಶ್ವಾಸವಿಟ್ಟು ಕಾರ್ಯಕ್ರಮ ನಡೆಸಿಕೊಡುವಂತೆ ಹೇಳಿದರು. ಆ ಬಳಿಕ ಎಲ್ಲವೂ ಬದಲಾಯಿತು ಎಂದು ನಟಿ ಮಂದಿರಾ ಬೇಡಿ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.